HomeKarnatakaಮಧ್ಯ ರಾತ್ರಿ ಬಂದ ಮಿಸ್ಡ್‌ ಕಾಲ್;‌ ಪೊಲೀಸರಿಗೆ ದೂರು ನೀಡಿದ ಕೆ.ಎಸ್.‌ ಈಶ್ವರಪ್ಪ

ಮಧ್ಯ ರಾತ್ರಿ ಬಂದ ಮಿಸ್ಡ್‌ ಕಾಲ್;‌ ಪೊಲೀಸರಿಗೆ ದೂರು ನೀಡಿದ ಕೆ.ಎಸ್.‌ ಈಶ್ವರಪ್ಪ

ಶಿವಮೊಗ್ಗ: ನಿನ್ನೆ ಮಧ್ಯರಾತ್ರಿ 12-30ಕ್ಕೆ ಖಝಕಿಸ್ಥಾನದಿಂದ ಮಿಸ್ಡ್ ಕಾಲ್ ಬಂದಿದ್ದು, ಇದು ಬಹುಶಃ ಕೊಲೆ ಬೆದರಿಕೆ ಕರೆಯಾಗಿರಬಹುದು ಎಂಬ ಅನುಮಾನದಲ್ಲಿ ನಾನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಇಂದು ದೂರು ಕೊಡುವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ +7(678)815-46-5(5) ಈ ನಂಬರಿನಿಂದ ಅನಾಮಧೇಯ ಅಂತರಾಷ್ಟ್ರೀಯ ಕರೆಯೊಂದು ಬಂದಿದೆ. ಇದು ಮಿಸ್ಡ್ ಕಾಲ್ ಆಗಿದೆ. ಆದರೆ ಈ ಹಿಂದೆ ಪಿಎಫ್‌ಐ ಸಂಘಟನೆಗೆ ಸೇರಿದ ಜಯೇಶ್ ಪೂಜಾರಿ ಅಲಿಯಾಸ್ ಶಾಹಿರಿ ಶೇಖ್ ಎಂಬಾತನನ್ನು ಮಹಾರಾಷ್ಟç ಪೊಲೀಸ್ ಇಲಾಖೆ ಬಂಧಿಸಿ ವಿಚಾರಣೆ ಮಾಡಿದಾಗ ಆ ವ್ಯಕ್ತಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಗೊತ್ತಾಗಿದೆ. ಈ ಕರೆಯೂ ಇಂತಹುದೇ ಇರಬಹುದು ಎಂಬ ಸಂಶಯದಿಂದ ನಾನು ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಆಗ್ರಹಿಸುತ್ತೇನೆ ಎಂದರು.

ರಾಜ್ಯದ ಜನತೆಯ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಕಾವಲು ನಾಯಿಯ ರೀತಿಯಲ್ಲಿ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ಮೋದಿ ಪ್ರಧಾನಿ ಆಗೇ ಆಗುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ರಾಜ್ಯದಲ್ಲಿ ಸೋತಿರಬಹುದು. ಆದರೆ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ ಬಾರಿ ಚುನಾವಣೆಯಲ್ಲಿ ನಮಗೆ ಶೇ.36ರಷ್ಟು ಜನರು ಮತ ನೀಡಿದ್ದರು. ಈ ಬಾರಿ ಶೇ.36.04ರಷ್ಟು ಮತ ನೀಡಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ, ಪಕ್ಷದ ಸಂಘಟನೆ, ನಾಯಕತ್ವ ಗುರುತಿಸಿ ಮತ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕೆಲವರು ರಾಷ್ಟ್ರದ್ರೋಹದ ಕೆಲಸಕ್ಕೆ ಕೈ ಹಾಕಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವದಲ್ಲಿ ಕೆಲವರು ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಅಲ್ಲಿನ ನೂತನ ಶಾಸಕರೇ ಹೇಳುವುದನ್ನು ನೋಡಿದರೆ ಈ ಘಟನೆ ನಿಜವಾಗಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular