HomeBusinessಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿಕೊಡಲು ಇಲ್ಲಿದೆ ಉಪಾಯ

ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿಕೊಡಲು ಇಲ್ಲಿದೆ ಉಪಾಯ

Money Management: ಹಣ ನಿರ್ವಹಣೆಯ ಬಗ್ಗೆ ನಿಮ್ಮ ಮಕ್ಕಳಿಗೆ ಈ ರೀತಿ ಕಲಿಸಿ.. ದುಡ್ಡಿನ ಮೌಲ್ಯ ತಿಳಿಸಿ -how to teach your child about money management

10 ರೂಪಾಯಿಗೆ ಏನಮ್ಮಾ ಬರತ್ತೆ ಅಂತ ರಾಗ ಎಳೆಯೋ ಮಕ್ಕಳೇ ಈಗ ಹೆಚ್ಚು. ಇತ್ತೀಚೆಗೆ ಜಂಕ್ ಫುಡ್ ಗಳ ರುಚಿಗೆ ಮಕ್ಕಳು ಮರುಳಾಗುತ್ತಿದ್ದಾರೆ. ಸರಿಯಾದ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಉಳಿತಾಯದ ಪಾಠ ತಿಳಿಸಿಕೊಡುವುದು ಸೂಕ್ತ.

10 ವರ್ಷಕ್ಕೆ ಕಾಲಿಟ್ಟ ಮಕ್ಕಳಿಗೆ ಪಿಗ್ಗಿ ಬ್ಯಾಂಕ್ ಅನ್ನು ಉಡುಗೊರೆಯಾಗಿ ಕೊಟ್ಟು, ಹಣದ ಉಳಿತಾಯದ ಪ್ರಯೋಜನ ಹಾಗೂ ಅವಶ್ಯಕತೆ ತಿಳಿಸುವುದು ಒಳಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಮಕ್ಕಳಿಗೆ ಹಣದ ಮಹತ್ವ ಹಾಗೂ ಜವಾಬ್ದಾರಿಯನ್ನು ಕಲಿಸುತ್ತದೆ. ಪಿಗ್ಗಿ ಬ್ಯಾಂಕ್ ತುಂಬಿದ ನಂತರ ಮಕ್ಕಳ ಅವಶ್ಯಕತೆ ಹಾಗೂ ಆಸಕ್ತಿಗೆ ಆದ್ಯತೆ ಕೊಟ್ಟು ಅವರಿಂದಲೇ ಅವರಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಪೋಷಕರು ಬೆಂಬಲಿಸಬೇಕು.

ಇದರಿಂದ ಮಕ್ಕಳಿಗೆ ದುಂದು ವೆಚ್ಚ ಮಾಡದೆ, ಹಣ ಗಳಿಕೆಯ ಸೂಕ್ತ ಅಭ್ಯಾಸ ಬೆಳೆಸಿದಂತೆ ಆಗುತ್ತದೆ. ಇದೇ ಅಭ್ಯಾಸ ಮುಂದುವರೆದು ಮಕ್ಕಳಿಗೆ ಹಣದ ನಿರ್ವಹಣೆಯ ಬಗ್ಗೆ ಮನೆಯಿಂದಲೇ ಸೂಕ್ತ ತರಬೇತಿ ಸಿಕ್ಕಂತೆ ಆಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular