
ಇಂದು ಬೆಳಗ್ಗೆ 10:30ರ ಸುಮಾರಿಗೆ ಹೊಳೆ ಬಸ್ ನಿಲ್ದಾಣದ ಬಳಿ ಇರುವ ಸೇತುವೆ ಮೇಲೆ ಈ ಘಟನೆ ನಡೆದಿದ್ದು, ಕಾಶಿಪುರದ ರಾಜು ಎಂಬಾತ ಹೊಳೆಗೆ ಹಾರಿದ್ದಾನೆ.
ತಕ್ಷಣವೇ ಇದನ್ನು ಗಮನಿಸಿದ ನೂರುಲ್ಲಾ ಮತ್ತು ಬಾಬು ಎಂಬವರು ಕೆಳಗಿಳಿದು ಯುವಕನನ್ನು ರಕ್ಷಿಸಿದ್ದು, ಆತನನ್ನು ಚಿಕಿತ್ಸೆಗಾಗಿ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.

