HomeLatest Newsಮಂಗಳೂರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿ

ಮಂಗಳೂರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಮಂಗಳೂರಿಗೆ ಅಲ್ಪಕಾಲದ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಅವರ ಭೇಟಿಗೆ ಹಾತೊರೆದರೂ ಅವಕಾಶ ಲಭ್ಯವಾಗಿಲ್ಲ.

ಸೌದಿ ಅರೇಬಿಯಾದಲ್ಲಿ ಆಸ್ಪತ್ರೆ ಹೊಂದಿರುವ ಕಾಸರಗೋಡಿನ ಬೇಕಲದ ಡಾ. ಶಾಜೀರ್ ಗಫರ್, ತಮ್ಮ ತಂದೆ ಪ್ರೊ. ಕೆ.ಕೆ. ಅಬ್ದುಲ್ ಗಫರ್ ಅವರ ಆತ್ಮಚರಿತ್ರೆ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಧೋನಿ ಅವರನ್ನು ಆಹ್ವಾನಿಸಿದ್ದು, ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಶಾಸಕ ಯು.ಟಿ. ಖಾದರ್ ಅವರ ಸಹೋದರ ಡಾ. ಯು.ಟಿ. ಇಫ್ತಿಕಾರ್ ಸ್ವಾಗತಿಸಿದ್ದು, ಬಳಿಕ ಮಹೇಂದ್ರ ಸಿಂಗ್ ಧೋನಿ ವಿಮಾನ ನಿಲ್ದಾಣದಿಂದ ಕಾಸರಗೋಡಿಗೆ ಐಷಾರಾಮಿ ಕಾರಿನಲ್ಲಿ ತೆರಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular