HomeRecipiesಬಿಸಿ ಬಿಸಿ ಅನ್ನದ ಜೊತೆ ಸಕತ್‌ ರುಚಿ ಸುಟ್ಟ ಬದನೆ ಗೊಜ್ಜು

ಬಿಸಿ ಬಿಸಿ ಅನ್ನದ ಜೊತೆ ಸಕತ್‌ ರುಚಿ ಸುಟ್ಟ ಬದನೆ ಗೊಜ್ಜು

ಪ್ರತಿ ದಿನ ಒಂದೇ ರೀತಿಯಾದ ಸಾಂಬಾರ್ ತಿಂದು ಬೇಜಾರಾಗಿದ್ಯಾ? ಸುಟ್ಟ ಬದನೆಕಾಯಿ ಗೊಜ್ಜು ಮಾಡಿ ಬಿಸಿ ಬಿಸಿ ಅನ್ನದ ಜೊತೆಗೆ ತಿಂದಾಗ ವ್ಹಾವ್! ಅಂತೀರಾ.

ಬೇಕಾಗುವ ಪದಾರ್ಥಗಳು

ದಪ್ಪ ಬದನೆಕಾಯಿ -1
ಹಸಿಮೆಣಸಿನಕಾಯಿ -5-6
ಹುಣಸೆಹಣ್ಣು – ಸ್ವಲ್ಪ
ಕಾಯಿ ತುರಿ – 4-5 ಚಮಚ
ಜೀರಿಗೆ -1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಬದನೆಕಾಯಿಯನ್ನು ತೊಳೆದು ಒಣಗಿದ ಬಟ್ಟೆಯಲ್ಲಿ ಒರೆಸಿ. ಬದನೆಕಾಯಿ ಮೇಲ್ಮೈಗೆ ಎಣ್ಣೆ ಸವರಿ, ಗ್ಯಾಸ್ ಸ್ಟೌವ್ ಬರ್ನರ್ ಮೇಲೆ ಮಂದ ಉರಿಯಲ್ಲಿ ಹದವಾಗಿ ಸುಡಿ. ಬದನೆಕಾಯಿ ಚೆನ್ನಾಗಿ ಸುಟ್ಟು, ಒಳಗೆ ಬೆಂದಾಗ ಎಣ್ಣೆ ಬಿಡಲು ಶುರುವಾಗುತ್ತದೆ. ಬದನೆಕಾಯಿ ತಣ್ಣಗಾದ ಮೇಲೆ ಮೇಲಿನ ಸಿಪ್ಪೆ ತೆಗೆದುಬಿಡಿ.

ಮಿಕ್ಸಿ ಜಾರಿಗೆ ಹಸಿಮೆಣಸಿನ ಕಾಯಿ, ಜೀರಿಗೆ, ಕೊತ್ತಂಬರಿ, ಕಾಯಿತುರಿ, ಹುಣಸೆಹಣ್ಣು, ಸುಟ್ಟ ಬದನೇಕಾಯಿ, ಉಪ್ಪು ಹಾಕಿ ಕೇವಲ 10 ಸೆಕೆಂಡ್ ವಿಪ್ ಮಾಡಿ.
ಈಗ ತಯಾರಾಗಿರುವ ಬದನೆ ಗೊಜ್ಜಿಗೆ ಒಗ್ಗರಣೆ ಮಾಡಿ ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular