HomeKarnatakaಬಿಜೆಪಿ ಸೇರ್ಪಡೆ ಕುರಿತಂತೆ ಸ್ಪಷ್ಟನೆ ಕೊಟ್ಟ ಸಂಸದೆ ಸುಮಲತಾ..!

ಬಿಜೆಪಿ ಸೇರ್ಪಡೆ ಕುರಿತಂತೆ ಸ್ಪಷ್ಟನೆ ಕೊಟ್ಟ ಸಂಸದೆ ಸುಮಲತಾ..!

ಮಂಡ್ಯ- ಇತ್ತೀಚೆಗೆ ಬಿಜೆಪಿ ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಸುಮಲತಾ ಫೋಟೋ ಹೆಚ್ಚಾಗಿ ಕಾಣಿಸುತ್ತಾ ಇದೆ. ಹೀಗಾಗಿ ಅನೇಕರು ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆ ಅಂತ ಹೇಳುತ್ತಿದ್ದರು. ಈ ವಿಚಾರಕ್ಕೆ ಇಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸೇರುವ ಬಗ್ಗೆ ಯೋಚನೆ ಮಾಡಿಲ್ಲ. ಈ ಬಗ್ಗೆ ಯಾವುದೇ ಸಭೆಯನ್ನೂ ಮಾಡಿಲ್ಲ. ಅಮಿತ್ ಶಾ ಜಿಲ್ಲೆಗೆ ಭೇಟಿ ನೀಡಿದಾಗ ಫ್ಲೆಕ್ಸ್ ನಲ್ಲಿ ನನ್ನ ಫೋಟೊ ಇದೆ ಎಂದ ಮಾತ್ರಕ್ಕೆ ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸರಿಯಲ್ಲ ಎಂದರು. ಈಗಾಗಲೇ ಸಚ್ಚಿದಾನಂದ ಬಿಜೆಪಿಗೆ ಸೇರಿದ್ದಾರೆ. ಅವರು ಮೊದಲಿನಿಂದ ನಮ್ಮ ಮನೆಗೆ ಆತ್ಮೀಯರು. ಅವರಿಗೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದೇನೆ. ಹಾಗಾಗಿ ಅವರ ಕೆಲವೊಂದು ಫ್ಲೆಕ್ಸ್ ನಲ್ಲಿ ಫೋಟೋ ಹಾಕಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ನಾನೇನು ಮಾಡಲಿ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸದ್ಯಕ್ಕೆ ಬಿಜೆಪಿ ಸೇರುವ ಬಗ್ಗೆ ಚಿಂತನೆ ನಡೆಸಿಲ್ಲ. ಸ್ವತಂತ್ರವಾಗಿ ಇರಿ ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ನಾನು ಸ್ವತಂತ್ರವಾಗಿ ಇರಲು ಬಯಸಿದ್ದೇನೆ. ಅನೇಕ ನಾಯಕರಿಗೆ ನಾನು ಬಿಜೆಪಿ ಸೇರ್ಪಡೆ ಆಗಲಿ ಅನ್ನೋ ಆಸೆ ಇದೆ. ಆದರೆ ಆ ಬಗ್ಗೆ ನಾನು ಯಾವುದೇ ನಿರ್ಧಾರವನ್ನು ತೆಗದುಕೊಂಡಿಲ್ಲ ಅಂತ ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular