HomeInternationalಬಿಕಿನಿ ಧರಿಸಿ ಈ ಕೆಲಸ ಮಾಡ್ತಾಳೆ ಯುವತಿ, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌......!

ಬಿಕಿನಿ ಧರಿಸಿ ಈ ಕೆಲಸ ಮಾಡ್ತಾಳೆ ಯುವತಿ, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌……!

ಸಾಮಾನ್ಯವಾಗಿ ಬೀಚ್‌ಗಳಿಗೆ , ಸ್ವಿಮ್ಮಿಂಗ್‌ ಪೂಲ್‌ಗಳಿಗೆ ಬಿಕಿನಿ ಧಿರಿಸಿ ಹೋಗುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಬಿಕಿನಿ ಹಾಕಿಕೊಂಡು ಕಾರ್ಪೆಂಟರ್‌ ಕೆಲಸ ಮಾಡ್ತಿದ್ದಾಳೆ. ಸಿಕ್ಕಾಪಟ್ಟೆ ಸೆಕ್ಸಿಯಾಗಿ ಬಟ್ಟೆ ಧರಿಸಿಕೊಂಡು ಕೆಲಸ ಮಾಡೋ ಈ ಯುವತಿ ಈಗ ಇಂಟರ್ನೆಟ್‌ನಲ್ಲೂ ವೈರಲ್‌ ಆಗಿದ್ದಾಳೆ. ಸಾಕಷ್ಟು ಟ್ರೋಲ್‌ಗೂ ತುತ್ತಾಗಿದ್ದಾಳೆ.

ಈಕೆಯ ಹೆಸರು ವುಡ್‌ಬನ್ನಿ. ಇನ್‌ಸ್ಟಾಗ್ರಾಮ್‌ನಲ್ಲಿ 3.70 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾಳೆ. ಜಾಲತಾಣದಲ್ಲಿ ಸಾಕಷ್ಟು ಆಕ್ಟಿವ್‌ ಆಗಿರೋ ವುಡ್‌ಬನ್ನಿ, ಪ್ರತಿನಿತ್ಯ ವಿಭಿನ್ನ ಬಿಕಿನಿಗಳಲ್ಲಿ ಕಾಣಿಸಿಕೊಳ್ತಾಳೆ. ಟೇಬಲ್‌, ಕುರ್ಚಿ, ಮಂಚ ಹೀಗೆ ಸಾಕಷ್ಟು ವಸ್ತುಗಳನ್ನು ಈಕೆ ತಯಾರಿಸ್ತಾಳೆ. ಬಿಕಿನಿಯಲ್ಲಿ ಕಾಣಿಸಿಕೊಳ್ಳೋದ್ರಿಂದ ಈಕೆಯ ವಿಡಿಯೋವನ್ನು ಲಕ್ಷಾಂತರ ಜನರು ನೋಡ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನರ ಗಮನ ಸೆಳೆಯಲು ಯುವತಿ ಇಂತಹ ತುಂಡುಡುಗೆ ಧರಿಸ್ತಾಳೆ ಅನ್ನೋದು ಕೆಲವರ ಆರೋಪ. ಇದೇ ಕಾರಣಕ್ಕೆ ಆಕೆ ಟ್ರೋಲ್‌ಗೆ ತುತ್ತಾಗಿದ್ದಾಳೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ವುಡ್‌ಬನ್ನಿ ಬಿಕಿನಿ ತೊಟ್ಟು ತನ್ನ ಕಾರ್ಪೆಂಟರ್‌ ಕೆಲಸವನ್ನು ಮುಂದುವರಿಸಿದ್ದಾಳೆ. ಸ್ಟೇನ್ & ಇಂಕ್ ಎಂಬ ಅಂಗಡಿಯನ್ನೂ ಈಕೆ ನಡೆಸುತ್ತಾಳೆ. ಈಕೆ ತಯಾರಿಸಿದ ವಸ್ತುಗಳನ್ನು ಜನರು ಆನ್‌ಲೈನ್‌ ಮೂಲಕ ಖರೀದಿಸಬಹುದು. ಇವಳ ಫಿಟ್ನೆಸ್‌ ವಿಡಿಯೋಗಳು ಕೂಡ ಸಾಕಷ್ಟು ಜನಪ್ರಿಯವಾಗಿವೆ.

 

 

 

 

For Latest News Updates, Join Our Whatsapp Community🚩
RELATED ARTICLES

Most Popular