
ಸ್ನಾನ ಮಾಡಿದ ನಂತ್ರ
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ .. ಮಂತ್ರವನ್ನು ಜಪಿಸಬೇಕು. ಇದನ್ನು ಪುರುಷನಿರಲಿ ಇಲ್ಲ ಸ್ತ್ರೀ ಇರಲಿ ಎಲ್ಲರೂ ಜಪಿಸಬಹುದು. ದೇವರ ಮನೆಯಲ್ಲಿ ಕುಳಿತು 108 ಬಾರಿ ಈ ಮಂತ್ರವನ್ನು ಪಠಿಸಬೇಕು.
ಅತ್ಯಂತ ಪ್ರಭಾವಶಾಲಿ ಮಂತ್ರ ಗಾಯತ್ರಿ ಮಂತ್ರ. ಸ್ನಾನ ಮಾಡಿದ ನಂತ್ರ ಮಾತ್ರ ಗಾಯತ್ರಿ ಮಂತ್ರವನ್ನು ಪಠಿಸಬೇಕು. ನಿಧಾನವಾಗಿ ಮಂತ್ರವನ್ನು ಹೇಳಬೇಕು. 108 ಬಾರಿ ಈ ಮಂತ್ರ ಜಪಿಸಿದ್ರೆ ಸಾಕಷ್ಟು ಲಾಭವಿದೆ.
ದೇವರ ಮನೆಯಲ್ಲಿಯೇ ಕುಳಿತು ಜಪ ಮಾಡಬೇಕಾಗುತ್ತದೆ. ಎಲ್ಲ ದೇವರ ಮಂತ್ರವನ್ನೂ ದೇವರ ಮನೆಯಲ್ಲಿ ಕುಳಿತು ಪಠಿಸುವುದ್ರಿಂದ ಹಾಗೂ ಪ್ರತಿದಿನ ದೇವರ ಪೂಜೆ ಮಾಡುವುದ್ರಿಂದ ಕೆಟ್ಟ ಸಮಯ ದೂರವಾಗಿ ಅದೃಷ್ಟ ಕೈ ಹಿಡಿಯುತ್ತದೆ.

