HomeKarnatakaಪಿಲಿಕುಳ ನಿಸರ್ಗಧಾಮಕ್ಕೆ ಈಗಾಗಲೇ ಶಿವರಾಮ ಕಾರಂತರ ಹೆಸರಿಟ್ಟಿದ್ದರೂ ಮತ್ತದೇ ಪ್ರಶ್ನೆ ಕೇಳಿದ ಶಾಸಕ....

ಪಿಲಿಕುಳ ನಿಸರ್ಗಧಾಮಕ್ಕೆ ಈಗಾಗಲೇ ಶಿವರಾಮ ಕಾರಂತರ ಹೆಸರಿಟ್ಟಿದ್ದರೂ ಮತ್ತದೇ ಪ್ರಶ್ನೆ ಕೇಳಿದ ಶಾಸಕ….

ಪಿಲಿಕುಳ ನಿಸರ್ಗಧಾಮ - ವಿಕಿಪೀಡಿಯಮಂಗಳೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಈಗಾಗಲೇ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತ ನಿಸರ್ಗಧಾಮ ಎಂದು ನಾಮಕರಣ ಮಾಡಲಾಗಿದೆ. ಆದರೆ ಈ ಮಾಹಿತಿ ತಿಳಿಯದೆ ಶಾಸಕರೊಬ್ಬರು ಅಧಿವೇಶನದಲ್ಲಿ ಮತ್ತದೇ ಪ್ರಶ್ನೆ ಕೇಳಿದ್ದಾರೆ.

ಹೌದು, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಪಿಲಿಕುಳ ನಿಸರ್ಗಧಾಮಕ್ಕೆ ಶಿವರಾಮ ಕಾರಂತರ ಹೆಸರಿಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ? ಹಾಗಿದ್ದರೆ ಇನ್ನೂ ಏಕೆ ನಾಮಕರಣ ಮಾಡಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

ಇದಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಉತ್ತರ ನೀಡಿದ್ದು, ಪಿಲಿಕುಳ ನಿಸರ್ಗಧಾಮಕ್ಕೆ ಈಗಾಗಲೇ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಎಂದು ನಾಮಕರಣ ಮಾಡಲಾಗಿದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular