HomeEntertainmentನಾಳೆ ರಿಲೀಸ್ ಮಾಡಲಿದ್ದಾರೆ 'ಟಗರು ಪಲ್ಯ' ಚಿತ್ರದ ಫಸ್ಟ್ ಲುಕ್

ನಾಳೆ ರಿಲೀಸ್ ಮಾಡಲಿದ್ದಾರೆ ‘ಟಗರು ಪಲ್ಯ’ ಚಿತ್ರದ ಫಸ್ಟ್ ಲುಕ್

Tagaru Palya: Kannada cinema gets a new heroine

ಈಗಾಗಲೇ ತನ್ನ ಟೈಟಲ್ ನಿಂದಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಟಗರು ಪಲ್ಯ ಚಿತ್ರದ ಫಸ್ಟ್ ಲುಕ್ ಅನ್ನು ನಾಳೆ 11:25ಕ್ಕೆ ಬಿಡುಗಡೆ ಮಾಡುವುದಾಗಿ  ಚಿತ್ರತಂಡ  ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ಉಮೇಶ್ ಕೃಪಾ ನಿರ್ದೇಶನದ ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ಅಭಿನಯಿಸಿದ್ದು, ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ನಾಯಕಿಯಾಗಿ ನಟಿಸಿದ್ದಾರೆ ಇದು ಅವರ ಚೊಚ್ಚಲ ಸಿನಿಮಾವಾಗಿದೆ.

ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ರಂಗಾಯಣ ರಘು, ತಾರಾ, ಯಶ ಶಿವಕುಮಾರ್, ಹುಲಿ ಕಾರ್ತಿ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

It's a wrap on Dhananjaya's third home production, Tagaru Palya

For Latest News Updates, Join Our Whatsapp Community🚩
RELATED ARTICLES

Most Popular