HomeEntertainmentದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸನ್ನಿ ಡಿಯೋಲ್ ಪುತ್ರ; ಪತ್ನಿಗೆ ವಿಶೇಷ ಸಂದೇಶ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸನ್ನಿ ಡಿಯೋಲ್ ಪುತ್ರ; ಪತ್ನಿಗೆ ವಿಶೇಷ ಸಂದೇಶ

ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ಅವರ ಮೊಮ್ಮಗ- ನಟ ಸನ್ನಿ ಡಿಯೋಲ್ ಅವರ ಮಗ ನಟ ಕರಣ್ ಡಿಯೋಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅವರು ಮುಂಬೈನಲ್ಲಿ ದೃಶಾ ಆಚಾರ್ಯ ಅವರನ್ನು ವಿವಾಹವಾದರು. ಇವರಿಬ್ಬರ ಮದುವೆ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಮದುವೆ ನಂತರ ಕರಣ್ ಡಿಯೋಲ್ ಸಂಭ್ರಮದ ಕ್ಷಣಗಳ ಫೋಟೋವನ್ನ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ನೀವು ನನ್ನ ಇಂದು ಮತ್ತು ನನ್ನ ಎಲ್ಲಾ ನಾಳೆಗಳು, ನಮ್ಮ ಜೀವನದಲ್ಲಿ ಒಂದು ಸುಂದರ ಪ್ರಯಾಣದ ಆರಂಭ. ನಮ್ಮನ್ನು ಸುತ್ತುವರೆದಿರುವ ಹೇರಳವಾದ ಆಶೀರ್ವಾದಗಳು ಮತ್ತು ಶುಭಾಶಯಗಳಿಗಾಗಿ ನಾವು ಅಗಾಧವಾಗಿ ಕೃತಜ್ಞರಾಗಿರುತ್ತೇವೆ……!” ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಈ ಪೋಸ್ಟ್ ಗೆ ಕರಣ್ ಡಿಯೋಲ್ ಅವರ ಚಿಕ್ಕಪ್ಪ ನಟ ಬಾಬಿ ಡಿಯೋಲ್ ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಸಂಗೀತ ಮತ್ತು ಮದುವೆಯ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ರಣವೀರ್ ಸಿಂಗ್ ಕೂಡ ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಕರಣ್ ಡಿಯೋಲ್ 2019 ರ ಚಲನಚಿತ್ರ ಪಾಲ್ ಪಾಲ್ ದಿಲ್ ಕೆ ಪಾಸ್‌ನೊಂದಿಗೆ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ಕೊನೆಯದಾಗಿ 2021 ರ ಚಲನಚಿತ್ರ ವೆಲ್ಲೆಯಲ್ಲಿ ಕಾಣಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular