HomeIndiaಡೆಲಿವರಿ ಬಾಯ್ ಮೇಲೆ ಎರಗಿದ ಗ್ರಾಹಕರ ಸಾಕುನಾಯಿ; ಅಪಾರ್ಟ್ ಮೆಂಟ್ ಕಟ್ಟಡದಿಂದ ಬಿದ್ದು ಗಾಯ

ಡೆಲಿವರಿ ಬಾಯ್ ಮೇಲೆ ಎರಗಿದ ಗ್ರಾಹಕರ ಸಾಕುನಾಯಿ; ಅಪಾರ್ಟ್ ಮೆಂಟ್ ಕಟ್ಟಡದಿಂದ ಬಿದ್ದು ಗಾಯ

ಅಪಾರ್ಟ್ ಮೆಂಟ್ ನಿವಾಸಿಗಳು ಸಾಕಿದ್ದ ನಾಯಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ
ಹೈದರಾಬಾದ್‌ನಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬರು ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾರೆ. ಈ ವರ್ಷದ ಜನವರಿಯಿಂದ ನಗರದಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ.

ಹೈದರಾಬಾದ್ ನ ಪಂಚವಟಿ ಕಾಲೋನಿಯಲ್ಲಿರುವ ಶ್ರೀನಿಧಿ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು 32 ವರ್ಷದ ಡೆಲಿವರಿ ಬಾಯ್ ಇಲ್ಯಾಸ್ ಗ್ರಾಹಕರ ಮನೆಗೆ ಡೆಲಿವರಿಗೆಂದು ಹೋಗಿದ್ದಾಗ ನಾಯಿ ದಾಳಿಯಿಂದ ಹಾಸಿಗೆ ಸೇರಿದ್ದಾರೆ.

ಪೋಲೀಸರ ಪ್ರಕಾರ ಬಾಗಿಲು ತೆರೆದಿದ್ದರಿಂದ ಗ್ರಾಹಕನ ಲ್ಯಾಬ್ರಡಾರ್ ಅವರ ಮೇಲೆ ದಾಳಿ ಮಾಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಯಾಸ್ ತನ್ನನ್ನು ನಾಯಿಯಿಂದ ರಕ್ಷಿಸಿಕೊಳ್ಳಲು ಗೋಡೆಯ ಮೇಲೆ ಹಾರಿದ್ದಾನೆ. ಗ್ರಾಹಕರು ಮತ್ತು ಇತರ ನಿವಾಸಿಗಳು ಆತನನ್ನು ರಕ್ಷಿಸಲು ಮುಂದಾದರು, ಆದರೆ ಇಲ್ಯಾಸ್ ಕಾಲು ಜಾರಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಯಾಸ್ ಅಪಾಯದಿಂದ ಪಾರಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಯದುರ್ಗಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜನವರಿ 11 ರಂದು, ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಅದೇ ರೀತಿ ಕೆರಳಿದ ಸಾಕು ನಾಯಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಅಪಾರ್ಟ್ಮೆಂಟ್ ನ ಮೂರನೇ ಮಹಡಿಯಿಂದ ಜಿಗಿದಿದ್ದರು. ನಂತರ ಗಂಭೀರ ಗಾಯಗಳಿಂದ ಅವರು ಸಾವನ್ನಪ್ಪಿದ್ದ.

For Latest News Updates, Join Our Whatsapp Community🚩
RELATED ARTICLES

Most Popular