HomeBusinessಜಾಗತಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಮಧ್ಯೆ ನೇಮಕಾತಿಗೆ ಮುಂದಾಗಿದೆ ಈ ಕಂಪನಿ...!

ಜಾಗತಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಮಧ್ಯೆ ನೇಮಕಾತಿಗೆ ಮುಂದಾಗಿದೆ ಈ ಕಂಪನಿ…!

ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿಂದ ವಿಶ್ವದಲ್ಲಿ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಕಂಪನಿಯೊಂದು ನೇಮಕಾತಿಗೆ ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಹೌದು, ಆಹಾರ ಪೂರೈಕೆ ಕಂಪನಿ ಝೋಮ್ಯಾಟೋ 800 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ. ಐದು ವಲಯಗಳಲ್ಲಿ ಈ ಆಯ್ಕೆ ನಡೆಯಲಿದ್ದು, ಇಂಜಿನಿಯರ್, ಉತ್ಪನ್ನ ಮ್ಯಾನೇಜರ್ ಗಳು ಮತ್ತು ಡೆವಲಪ್ಮೆಂಟ್ ಮ್ಯಾನೇಜರ್ ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಝೋಮ್ಯಾಟೋ ತನ್ನ ಪ್ರಸ್ತುತ ವ್ಯವಹಾರದ ಮರು ಬ್ರಾಂಡಿಂಗ್ ಗಾಗಿ ಪ್ರಯತ್ನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಸೋಮವಾರದಂದು 10 ನಿಮಿಷಗಳ ಕಾಲ ಡೆಲಿವರಿ ಸೇವೆಯನ್ನು ರದ್ದುಗೊಳಿಸಿತ್ತು.

For Latest News Updates, Join Our Whatsapp Community🚩
RELATED ARTICLES

Most Popular