HomeKarnatakaಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂ.ಬಿ. ಪಾಟೀಲ್ ವಾರ್ನಿಂಗ್

ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂ.ಬಿ. ಪಾಟೀಲ್ ವಾರ್ನಿಂಗ್

ಕಾಂಗ್ರೆಸ್ ಸರ್ಕಾರವನ್ನು ಹಿಟ್ಲರ್ ಸರ್ಕಾರ ಎಂದು ಕರೆದಿರುವ ಚಕ್ರವರ್ತಿ ಸೂಲಿಬೆಲೆ ಅವರು ಈ ನಾಲ್ಕು ವರ್ಷ ಏನೆಲ್ಲಾ ಅನಾಹುತ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಇನ್ನು ಮುಂದೆ ಇಂತಹ ನಾಟಕ ಮಾಡಿದರೆ ಜೈಲಿನ ಕಂಬಿ ಎಣಿಸುವುದು ಗ್ಯಾರಂಟಿ ಎಂದು ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಚಕ್ರವರ್ತಿ ಸೂಲಿಬೆಲೆ ಬರಿ ಅನಾಹುತವನ್ನೇ ಮಾಡಿದ್ದು, ಹಿಜಾಬ್, ಹಲಾಲ್ ಕಟ್, ಆಜಾನ್ ಮೊದಲಾದ ನಾಟಕಗಳನ್ನು ಮಾಡಿದ್ದರು. ಆದರೆ ಈಗ ಅವುಗಳಿಗೆಲ್ಲಾ ಅವಕಾಶವಿಲ್ಲ ಎಂದು ಗುಡುಗಿದರು.

ಇನ್ನು ತನ್ನ ಅಜೆಂಡಾವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲು ಹೊರಟಿದ್ದ ಬಿಜೆಪಿ ಹಾಗೂ ಆರ್ ಎಸ್ ಎಸ್, ಉರಿ ಗೌಡ – ನಂಜೇಗೌಡ ಅವರಂತಹ ಪಾತ್ರಗಳನ್ನು ಸೃಷ್ಟಿಸಿದ್ದರು. ಇದರಿಂದ ಕೋಮು ಸೌಹಾರ್ದಕ್ಕೆ ಕೊಳ್ಳಿ ಇಡಲು ಅವರು ಹೊರಟಿದ್ದು, ಆದರೆ ನಮ್ಮ ಸರ್ಕಾರ ಎಲ್ಲ ಸಮಾಜಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular