HomeBusinessಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ ಎಷ್ಟು ಶ್ರೀಮಂತರು ಗೊತ್ತಾ......?

ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ ಎಷ್ಟು ಶ್ರೀಮಂತರು ಗೊತ್ತಾ……?

 

 Priti Adani Networth: कितनी अमीर हैं गौतम अडानी की पत्नी प्रीति अडानी? जानिए लाइफस्टाइल और नेटवर्थ

ಗೌತಮ್ ಅದಾನಿ ಅದಾನಿ ಗ್ರೂಪ್‌ನ ಮುಖ್ಯಸ್ಥರು. ಅವರು ಭಾರತದ ಎರಡನೇ ಶ್ರೀಮಂತ ವ್ಯಕ್ತಿ. ಫೋರ್ಬ್ಸ್ ಪ್ರಕಾರ, ಅವರು 48.9 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಆದರೆ ಅವರ ಪತ್ನಿ ಪ್ರೀತಿ ಅದಾನಿ ಕೂಡ ಕಡಿಮೆ ಏನಿಲ್ಲ. ಗೌತಮ್ ಅದಾನಿಯವರ ಯಶಸ್ಸಿನ ಹಿಂದೆ ಅವರ ಪತ್ನಿ ಪ್ರೀತಿ ಅದಾನಿ ಪಾತ್ರ ದೊಡ್ಡದಿದೆ. ಪ್ರೀತಿ ಅದಾನಿ ಪ್ರಸ್ತುತ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಉದ್ಯಮಿ ಜೊತೆಗೆ ಪ್ರೀತಿ ಗೌತಮ್ ಅದಾನಿ ದಂತವೈದ್ಯರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೀತಿ ಅದಾನಿ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಮಾಧ್ಯಮ ವರದಿಗಳ ಪ್ರಕಾರ, ಅವರು 1 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ವ್ಯವಹಾರವನ್ನು ಪ್ರೀತಿ ಅದಾನಿ ಅಚ್ಚುಕಟ್ಟಾಗಿ ನಿಭಾಯಿಸ್ತಾರೆ. ಪ್ರೀತಿ ಮತ್ತು ಗೌತಮ್ ಅದಾನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಪುತ್ರರು. ಅದಾನಿ ಗ್ರೂಪ್‌ನಲ್ಲಿ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. 2020 ರಲ್ಲಿ ಗೌತಮ್ ಅದಾನಿ 400 ಕೋಟಿ ಮೌಲ್ಯದ ಮನೆಯನ್ನು ಖರೀದಿಸಿದ್ದರು. ಗೌತಮ್ ಅದಾನಿ ಬೊಂಬಾರ್ಡಿಯರ್, ಬೀಚ್‌ಕ್ರಾಫ್ಟ್ ಮತ್ತು ಹಾಕರ್‌ನಂತಹ ವಿಮಾನಗಳನ್ನು ಹೊಂದಿದ್ದಾರೆ.

1965 ರಲ್ಲಿ ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಿಸಿದ ಪ್ರೀತಿ ಅದಾನಿ ಅಹಮದಾಬಾದ್‌ನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪಡೆದರು. ಗೌತಮ್ ಅದಾನಿಯನ್ನು ಮದುವೆಯಾದ ನಂತರ, ಅವರು 1996 ರಲ್ಲಿ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾದರು. ಅದಾನಿ ಗ್ರೂಪ್ ಅನ್ನು ನಿರ್ವಹಿಸುವುದರ ಜೊತೆಗೆ, ಬಡವರಿಗೆ ನೆರವಾಗ್ತಾರೆ.

ಪ್ರೀತಿ ಅದಾನಿ 1966 ರಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ಅದಾನಿ ಫೌಂಡೇಶನ್ ಅನ್ನು ಸ್ಥಾಪಿಸಿದರು. 21 ವರ್ಷಗಳ ನಂತರ, ಅವರು ಮತ್ತು ಅವರ ಫೌಂಡೇಶನ್ ದೇಶದ 18 ಕ್ಕೂ ಹೆಚ್ಚು ರಾಜ್ಯಗಳನ್ನು ಆವರಿಸುವಲ್ಲಿ ಯಶಸ್ವಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular