HomeEntertainmentಕ್ಷೇತ್ರಪತಿ ಚಿತ್ರದ ಮೊದಲ ಹಾಡು ಬಿಡುಗಡೆ

ಕ್ಷೇತ್ರಪತಿ ಚಿತ್ರದ ಮೊದಲ ಹಾಡು ಬಿಡುಗಡೆ

Naveen Shankar

ಶ್ರೀಕಾಂತ್ ಕಟಗಿ ನಿರ್ದೇಶನದ ಬಹು ನಿರೀಕ್ಷಿತ ‘ಕ್ಷೇತ್ರಪತಿ’ ಚಿತ್ರದ ಮೊದಲ ಹಾಡು ಮೊನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ ಬಂದಿರುವ ಉತ್ತರ ಕನ್ನಡ ಶೈಲಿಯ ಈ ಹಾಡು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ರೈತರ ಹೋರಾಟದ ಈ ಚಿತ್ರದಲ್ಲಿ ನವೀನ್ ಶಂಕರ್ ನಾಯಕನಾಗಿದ್ದು, ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿಯಾಗಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೇ ತಿಂಗಳು ಆಗಸ್ಟ್ 18ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular