HomeKarnatakaಕೊನೆಯುಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು - SDPI ಆಕ್ಸಿಜನ್; ಯು.ಟಿ. ಖಾದರ್ ವ್ಯಂಗ್ಯ

ಕೊನೆಯುಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು – SDPI ಆಕ್ಸಿಜನ್; ಯು.ಟಿ. ಖಾದರ್ ವ್ಯಂಗ್ಯ

 

ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಯು.ಟಿ. ಖಾದರ್, ಬಿಜೆಪಿ ಸರ್ಕಾರ ಕೊನೆಯುಸಿರೆಳೆಯುತ್ತಿದೆ. ಹೀಗಾಗಿ ಟಿಪ್ಪು, ಭಯೋತ್ಪಾದನೆ ಮತ್ತು ಎಸ್‌ಡಿಪಿಐ ವಿಚಾರಗಳನ್ನು ಆಕ್ಸಿಜನ್ ಆಗಿ ಬಳಕೆ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಭಾರತ -ಪಾಕಿಸ್ತಾನದ ನಡುವೆ ಕ್ರಿಕೆಟ್ ಬೇಡ ಎಂದಿದ್ದೆವು. ಆದರೆ ಈಗಿನ ಸರ್ಕಾರ ಎರಡೂ ತಂಡಗಳನ್ನು ದುಬೈಗೆ ಕರೆದುಕೊಂಡು ಹೋಗಿ ಪಂದ್ಯಗಳನ್ನು ಆಡಿಸುತ್ತಿದೆ ಎಂದು ಆರೋಪಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular