
ಮಂಗಳವಾರದಂದು ಗದಗದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಜನ ಧ್ವನಿ ಯಾತ್ರೆಯ ವೇದಿಕೆಯಲ್ಲಿ ಕೆಲವರು ಕೇಸರಿ ಬಣ್ಣದ ಪೇಟ ಕೊಡಲು ಮುಂದಾಗಿದ್ದು, ಇದನ್ನು ಸಿದ್ದರಾಮಯ್ಯನವರು ಸ್ವೀಕರಿಸಿಲ್ಲ.
ಅಲ್ಲದೆ ಸಭೆ ಆರಂಭವಾಗುವ ಮುನ್ನ ಕುಂಕುಮ ಹಚ್ಚಿಕೊಂಡಿದ್ದ ಸಿದ್ದರಾಮಯ್ಯನವರು ಬಳಿಕ ಮುಖ ಒರೆಸಿಕೊಳ್ಳುವಾಗ ಕುಂಕುಮವನ್ನೂ ಸಹ ಒರೆಸಿಕೊಂಡಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

