HomeEntertainmentಕಾಲೇಜು ವಿದ್ಯಾರ್ಥಿನಿಯರಿಗೆ 'ದಿ ಕೇರಳ ಸ್ಟೋರಿ' ಉಚಿತ ವೀಕ್ಷಣೆಗೆ ಬಜರಂಗ ದಳದಿಂದ ಆಯೋಜನೆ

ಕಾಲೇಜು ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ’ ಉಚಿತ ವೀಕ್ಷಣೆಗೆ ಬಜರಂಗ ದಳದಿಂದ ಆಯೋಜನೆ

ಕೇರಳದಲ್ಲಿನ ಮತಾಂತರ ಕುರಿತ ಕಥಾ ಹಂದರ ಹೊಂದಿರುವ ‘ದಿ ಕೇರಳ ಸ್ಟೋರಿ’ ಈಗಾಗಲೇ ಬಿಡುಗಡೆಯಾಗಿದ್ದು, ಬಿಜೆಪಿ ಆಡಳಿತದಲ್ಲಿರುವ ಕೆಲ ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿವೆ.

ಕರ್ನಾಟಕದಲ್ಲಿಯೂ ಈ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ತಾಲೂಕು ಬಜರಂಗದಳದ ಕಾರ್ಯಕರ್ತರು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಗುರುವಾರದಂದು ಈ ಚಿತ್ರದ ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಲೇಜು ವಿದ್ಯಾರ್ಥಿನಿಯರ ವೀಕ್ಷಣೆಗಾಗಿ ಭದ್ರಾವತಿಯ ನೇತ್ರಾವತಿ ಚಿತ್ರಮಂದಿರದಲ್ಲಿ 150 ಸೀಟುಗಳನ್ನು ಕಾಯ್ದಿರಿಸಿದ್ದು, ವಿವಿಧ ಕಾಲೇಜುಗಳ ನೂರು ಮಂದಿ ವಿದ್ಯಾರ್ಥಿನಿಯರು ಆಗಮಿಸಿ ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular