HomeKarnatakaಕಾರ್ಯಕರ್ತರ ಸಭೆಯಲ್ಲಿದ್ದಾಗಲೇ ಆರೋಗ್ಯದಲ್ಲಿ ಏರುಪೇರು; ಸಿ.ಟಿ. ರವಿ ಆಸ್ಪತ್ರೆಗೆ ದಾಖಲು

ಕಾರ್ಯಕರ್ತರ ಸಭೆಯಲ್ಲಿದ್ದಾಗಲೇ ಆರೋಗ್ಯದಲ್ಲಿ ಏರುಪೇರು; ಸಿ.ಟಿ. ರವಿ ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ, ಕಾರ್ಯಕರ್ತರ ಸಭೆಯಲ್ಲಿದ್ದಾಗಲೇ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಗೆ ತೆರಳಿ ಅಡ್ಮಿಟ್ ಆಗಿದ್ದಾರೆ.

ಶನಿವಾರ ಸಂಜೆ ಕಾರ್ಯಕರ್ತರ ಸಭೆಯಲ್ಲಿದ್ದಾಗ ಸಿ.ಟಿ. ರವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಟ್ಟಾಗ ಕಿಡ್ನಿ ಸ್ಟೋನ್ ಇರುವುದು ಗೊತ್ತಾಗಿದೆ.

ಕಿಡ್ನಿಯಲ್ಲಿ 12 ಎಂಎಂ ಕಲ್ಲು ಇದೆ ಎಂದು ಹೇಳಲಾಗಿದ್ದು, ಹೀಗಾಗಿ ಸ್ಟಂಟ್ ಮೂಲಕ ಕಲ್ಲುಗಳನ್ನು ವೈದ್ಯರು ರವಾನೆ ಮಾಡುತ್ತಿದ್ದಾರೆ. ಇಂದು ರಾತ್ರಿ ವೇಳೆಗೆ ಸಿ.ಟಿ. ರವಿ ಡಿಸ್ಚಾರ್ಜ್ ಅಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular