ಕಾರಿನ ಮೂಲಕ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ; ಠಾಣೆ ಮೆಟ್ಟಿಲೇರಿದ ಪತಿ

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಬಟಾಬಯಲು. ಯಾವುದನ್ನೂ ಗುಟ್ಟೆಂದು ಮುಚ್ಚಿಡಲು ಆಗುವುದಿಲ್ಲ. ಇಂತಹುದೇ ಒಂದು ಪ್ರಕರಣದಲ್ಲಿ ಆಧುನಿಕ ಟೆಕ್ನಾಲಜಿ ಮೂಲಕ ಪತಿಯೊಬ್ಬ ತನ್ನ ಪತ್ನಿಯ ಅನೈತಿಕ ಸಂಬಂಧವನ್ನು ಪತ್ತೆ ಹಚ್ಚಿದ್ದಾನೆ. ಅಷ್ಟೇ ಅಲ್ಲ, ಇದೀಗ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಇಂತಹದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ನಿಖಿಲ್ ಎಂಬುವರು 2020ರಲ್ಲಿ ಹೊಸ ಐ20 ಕಾರು ಖರೀದಿಸಿದ್ದರು. ಇದರಲ್ಲಿ ಜಿಪಿಎಸ್ ಅಳವಡಿಕೆಯಾಗಿದ್ದು, ಕಾರು ಸಂಚರಿಸಿದ ಸಂಪೂರ್ಣ ವಿವರ ನಿಖಿಲ್ ಮೊಬೈಲ್ ನಲ್ಲಿ ದಾಖಲಾಗುತ್ತಿತ್ತು.

ನಿಖಿಲ್ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದು ಈ ಸಂದರ್ಭದಲ್ಲಿ ಆತನ ಪತ್ನಿ ಪ್ರಿಯಾಂಕಾ ಜಿಪಿಎಸ್ ಬಗ್ಗೆ ಅರಿವಿಲ್ಲದೆ ಕಾರು ತೆಗೆದುಕೊಂಡು ಹೋಗಿದ್ದಾರೆ. ಈ ಕಾರು ಏರ್ಪೋರ್ಟ್ ಬಿಇಎಲ್ ಸರ್ಕಲ್ ಬಳಿ ಇರುವ ಲಾಡ್ಜ್ ಮುಂದೆ ಬೆಳಗಿನ ಜಾವ ಐದು ಗಂಟೆಯವರೆಗೂ ಪಾರ್ಕ್ ಆಗಿತ್ತು. ಇದರ ಎಲ್ಲ ಮಾಹಿತಿ ನಿಖಿಲ್ ಮೊಬೈಲ್ ಗೆ ರವಾನೆಯಾಗಿದೆ.

ಹೀಗಾಗಿ ನಿಖಿಲ್ ಲಾಡ್ಜ್ ಗೆ ಬಂದು ವಿಚಾರಿಸಿದ ವೇಳೆ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಅಶೋಕ್, ಲಾಡ್ಜ್ ನಲ್ಲಿ ತಂಗಿರುವುದು ಬೆಳಕಿಗೆ ಬಂದಿದೆ. ಇದನ್ನು ಪತ್ನಿ ಬಳಿ ವಿಚಾರಿಸಿದಾಗ ಪ್ರಿಯಕರನ ಜೊತೆ ಸೇರಿ ಬೆದರಿಕೆ ಹಾಕಲಾಗಿದೆ. ಹೀಗಾಗಿ ನಿಖಿಲ್ ಈಗ ಮಹಾಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read