HomeKarnatakaಎಸಿ ಸ್ಫೋಟದಿಂದ ಮನೆಗೆ ಬೆಂಕಿ; ತಾಯಿ - ಮಕ್ಕಳಿಬ್ಬರು ಸಜೀವ ದಹನ

ಎಸಿ ಸ್ಫೋಟದಿಂದ ಮನೆಗೆ ಬೆಂಕಿ; ತಾಯಿ – ಮಕ್ಕಳಿಬ್ಬರು ಸಜೀವ ದಹನ

ರಾಜ್ಯದಲ್ಲಿ ಬಿರು ಬೇಸಿಗೆ ಆರಂಭವಾಗಿರುವ ಕಾರಣ ಇದರಿಂದ ಹೊರಬರಲು ಫ್ಯಾನ್, ಎಸಿ ಗೆ ಜನ ಮೊರೆ ಹೋಗುತ್ತಿದ್ದಾರೆ. ಹೀಗೆ ಆನ್ ಮಾಡಿದ್ದ ಎಸಿ ಸ್ಪೋಟಗೊಂಡ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಆರ್ ಟಿ ಪಿ ಎಸ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಸಿದ್ದಲಿಂಗಯ್ಯ ಸ್ವಾಮಿ ಅವರ ಶಕ್ತಿನಗರದ ಮನೆಯಲ್ಲಿ ಸೋಮವಾರದಂದು ಈ ಘಟನೆ ನಡೆದಿದ್ದು, 33 ವರ್ಷದ ರಂಜಿತಾ,13 ವರ್ಷದ ಮೃದುಲಾ ಹಾಗೂ 5 ವರ್ಷದ ತಾರುಣ್ಯ ಮೃತಪಟ್ಟಿದ್ದಾರೆ.

ಎಸಿ ಸ್ಪೋಟಗೊಂಡ ಪರಿಣಾಮ ಮನೆಗೆ ಬೆಂಕಿ ತಗುಲಿದ್ದು, ಸಕಾಲಕ್ಕೆ ಹೊರಬರಲಾಗದೆ ಮೂವರು ಸಹ ಸಾವಿಗೀಡಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular