HomeIndiaಈ ನಗರದಲ್ಲಿ ಸಿದ್ಧವಾಗುತ್ತದೆ ವಿಶ್ವದ ಅತಿದೊಡ್ಡ ರೊಟ್ಟಿ, ತೂಕ ಬರೋಬ್ಬರಿ 145 ಕೆಜಿ…..!

ಈ ನಗರದಲ್ಲಿ ಸಿದ್ಧವಾಗುತ್ತದೆ ವಿಶ್ವದ ಅತಿದೊಡ್ಡ ರೊಟ್ಟಿ, ತೂಕ ಬರೋಬ್ಬರಿ 145 ಕೆಜಿ…..!

ಭಾರತವು ತನ್ನ ವೈವಿಧ್ಯಮಯ ಆಹಾರಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ನೂರು ಕಿಲೋಮೀಟರ್‌ಗಳಿಗೆ ಆಹಾರದ ರುಚಿ ಮತ್ತು ಅಡುಗೆ ಮಾಡುವ ವಿಧಾನ ಬದಲಾಗುತ್ತದೆ. ಚಪಾತಿಯನ್ನು ಬಹುತೇಕ ಎಲ್ಲಾ ಕಡೆ ಸೇವನೆ ಮಾಡಲಾಗುತ್ತದೆ. ಭಾರತದಲ್ಲಿ, ವಿಶ್ವದ ಅತಿದೊಡ್ಡ ರೊಟ್ಟಿಯನ್ನು ತಯಾರಿಸುವ ಸ್ಥಳವಿದೆ. ಈ ರೊಟ್ಟಿಯ ಗಾತ್ರ ಎಷ್ಟಿದೆ ಅಂದರೆ ಒಂದೇ ರೊಟ್ಟಿಯಲ್ಲಿ ಇಡೀ ಗ್ರಾಮಸ್ಥರ ಹೊಟ್ಟೆ ತುಂಬಿಸಬಹುದು.

ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಚಪಾತಿ ತಯಾರಾಗಿದೆ. ಈ ರೊಟ್ಟಿಯನ್ನು ಪ್ರತಿನಿತ್ಯ ಮಾಡುವುದಿಲ್ಲ. ಬದಲಿಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ದಗ್ದು ಸೇಠ್ ಗಣಪತಿ ಸಾರ್ವಜನಿಕ ಉತ್ಸವ ಅಥವಾ ಜಲರಾಮ್ ಬಾಪಾ ಅವರ ಜನ್ಮದಿನದಂದು ಭಾರೀ ಗಾತ್ರದ ಚಪಾತಿ ಸಿದ್ಧಪಡಿಸುವುದು ವಾಡಿಕೆ. ಜಲರಾಮ್ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರು ಈ ರೊಟ್ಟಿಯನ್ನು ಮಾಡುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದನ್ನು ಬಡಿಸಲಾಗುತ್ತದೆ. ವಿಶೇಷ ದಿನದಂದು ಈ ರೊಟ್ಟಿಯನ್ನು ತಿನ್ನಲು ಜನರು ದೂರದ ಸ್ಥಳಗಳಿಂದ ಜಾಮ್‌ನಗರಕ್ಕೆ ಬರುತ್ತಾರೆ. ಪ್ರಪಂಚದ ಅತಿ ದೊಡ್ಡ ರೊಟ್ಟಿಯನ್ನು ತಯಾರಿಸಲು ಒಂದಲ್ಲ ಎರಡಲ್ಲ ಅನೇಕ ಮಹಿಳೆಯರು ಒಟ್ಟುಗೂಡುತ್ತಾರೆ. ಹಲವು ಗಂಟೆಗಳ ಕಠಿಣ ಪರಿಶ್ರಮದ ನಂತರ ಈ ರೊಟ್ಟಿ ಸಿದ್ಧವಾಗುತ್ತದೆ.

ಈ ರೊಟ್ಟಿ ಮಾಡಲು ಸಾಕಷ್ಟು ಗೋಧಿ ಹಿಟ್ಟನ್ನು ಬಳಸಲಾಗುತ್ತದೆ. ಈ ಚಪಾತಿಯ ತೂಕ 145 ಕೆಜಿ. ಇದನ್ನು ಬೇಯಿಸಲು ದೇವಾಲಯದ ಬಳಿ ದೊಡ್ಡದಾದ ಕಾವಲಿಯೇ ಇದೆ. ರೊಟ್ಟಿಯನ್ನು ಬೇಯಿಸಲು ಅನೇಕ ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಮತ್ತು ರೊಟ್ಟಿ ಸುಡದಂತೆ ಜ್ವಾಲೆಯನ್ನು ಕಡಿಮೆ ಇರಿಸಲಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular