HomeHealthಈರುಳ್ಳಿ ಅತಿಯಾಗಿ ಸೇವಿಸಿದರೆ ಕಾಡುವುದು ಈ ಸಮಸ್ಯೆ....!

ಈರುಳ್ಳಿ ಅತಿಯಾಗಿ ಸೇವಿಸಿದರೆ ಕಾಡುವುದು ಈ ಸಮಸ್ಯೆ….!

ಈರುಳ್ಳಿಯನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಅದನ್ನು ಅತಿಯಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. ಹಾಗಾಗಿ ಅದು ಏನೆಂಬುದನ್ನು ತಿಳಿದುಕೊಳ್ಳಿ.

*ಇದರಲ್ಲಿ ಕಾರ್ಬೋಹೈಡ್ರೇಟ್ ಗಳು ಅಧಿಕವಾಗಿದ್ದು, ಇದು, ಆಯಾಸ, ಹೊಟ್ಟೆಯ ಸೆಳೆತ, ಕೆಲವರಲ್ಲಿ ಜೀರ್ಣಕ್ರಿಯೆ ಮತ್ತು ಎದೆಯುರಿ ಸಮಸ್ಯೆಯನ್ನುಂಟು ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಇದನ್ನು ಅತಿಯಾಗಿ ಸೇವಿಸಿದರೆ ಕೆಲವರು ಚರ್ಮದ ಕಿರಿಕಿರಿ ಸಮಸ್ಯೆಯನ್ನು ಅನುಭವಿಸುತ್ತಾರೆ.

*ಕೆಲವು ಅಧ್ಯಯನಗಳ ಪ್ರಕಾರ ಈರುಳ್ಳಿ ಅಲರ್ಜಿ ಇರುವವರು ಕಣ್ಣಿನಲ್ಲಿ ತುರಿಕೆ ಮತ್ತು ಕೆಂಪು ಬಣ್ಣದ ಕಣ್ಣಿನ ಸಮಸ್ಯೆಗೆ ಒಳಗಾಗುತ್ತಾರೆ.

*ಆಸಿಡ್ ರಿಫ್ಲಕ್ಸ್ ಸಮಸ್ಯೆ ಇರುವವರು ಈರುಳ್ಳಿಯನ್ನು ತಪ್ಪಿಸಬೇಕು. ಇಲ್ಲವಾದರೆ ಇದು ಎದೆಯುರಿ ಸಮಸ್ಯೆಯನ್ನು ಉಲ್ಭಣಗೊಳಿಸುತ್ತದೆ.

*ಈರುಳ್ಳಿ ಸೇವನೆಯಿಂದ ರಕ್ತ ತೆಳ್ಳಗಾಗುವುದರಿಂದ ಇದರಿಂದ ಹಲವು ಸಮಸ್ಯೆ ಕಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular