HomeLifestyleಇಲ್ಲಿದೆ ಟೇಸ್ಟಿಯಾದ ತೆಂಗಿನಕಾಯಿ ಸಿಹಿ ವಡೆ ಮಾಡುವ ವಿಧಾನ

ಇಲ್ಲಿದೆ ಟೇಸ್ಟಿಯಾದ ತೆಂಗಿನಕಾಯಿ ಸಿಹಿ ವಡೆ ಮಾಡುವ ವಿಧಾನ

ತೆಂಗಿನಕಾಯಿ ಇಲ್ಲದೆ ಸಾಂಬಾರು ಪಲ್ಯ ಪರಿಪೂರ್ಣವಾಗುವುದಿಲ್ಲ. ಹೀಗಾಗಿ ತೆಂಗಿನಕಾಯಿ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ.

ಕೇವಲ ಸಾಂಬಾರ್, ಪಲ್ಯ ಅಷ್ಟೇ ಅಲ್ಲದೆ ತೆಂಗಿನಕಾಯಿ ಉಪಯೋಗಿಸಿ ವಡೆಯನ್ನು ಕೂಡ ತಯಾರಿಸಬಹುದು. ಅದನ್ನು ತಯಾರಿಸುವ ವಿವರ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೆಂಗಿನ ಕಾಯಿ ತುರಿ 2 ಕಪ್
ಚಿರೋಟಿ ರವೆ 1 ಕಪ್
ಮೈದಾ ಹಿಟ್ಟು 2 ಕಪ್
ಸಕ್ಕರೆ ಪುಡಿ 1 ಕಪ್
ಏಲಕ್ಕಿ ಪುಡಿ 1/4 ಚಮಚ
ಜಾಕಾಯಿ ಪುಡಿ 1/4 ಚಮಚ
ಎಣ್ಣೆ ಕರೆಯಲು.

ಮಾಡುವ ವಿಧಾನ

ತೆಂಗಿನಕಾಯಿ ತುರಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಸಕ್ಕರೆ ಪುಡಿ, ಏಲಕ್ಕಿ ಪುಡಿ, ಜಾಕಾಯಿ ಪುಡಿ ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ಕಲಸಿದ ಮಿಶ್ರಣವನ್ನು 20 ನಿಮಿಷಗಳ ಕಾಲ ನೆನೆಯಲು ಬಿಡಬೇಕು.

ನಂತರ ಕಾದ ಎಣ್ಣೆಗೆ ಕಲಸಿದ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ವಡೆಯ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು. ಈಗ ತೆಂಗಿನ ಕಾಯಿ ಸಿಹಿ ವಡೆ ರೆಡಿ ಟು ಈಟ್.

For Latest News Updates, Join Our Whatsapp Community🚩
RELATED ARTICLES

Most Popular