HomeBeautyಇಲ್ಲಿದೆ ಚರ್ಮದ ಮೇಲಾಗಿರುವ ಕಲೆ ಹೋಗಲಾಡಿಸುವ ಸುಲಭ ಉಪಾಯ

ಇಲ್ಲಿದೆ ಚರ್ಮದ ಮೇಲಾಗಿರುವ ಕಲೆ ಹೋಗಲಾಡಿಸುವ ಸುಲಭ ಉಪಾಯ

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನ ಶೂನ್ಯ. ಮನೆಯಲ್ಲಿಯೇ ಮದ್ದು ಮಾಡಿ ಕಲೆ ಹೋಗಲಾಡಿಸಿಕೊಳ್ಳುವ ಟಿಪ್ಸ್ ನಾವು ಹೇಳ್ತೇವೆ ಕೇಳಿ.

ಐದು ಬಾದಾಮಿ, 100 ಎಂ.ಎಲ್. ರೋಸ್ ವಾಟರ್, ಒಂದು ಚಮಚ ಶ್ರೀಗಂಧದ ಪುಡಿ ತೆಗೆದುಕೊಳ್ಳಿ. ಮೊದಲು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ. ನಂತ್ರ ಅದನ್ನು ಪುಡಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತ್ರ ಅದಕ್ಕೆ ರೋಸ್ ವಾಟರ್ ಹಾಗೂ ಶ್ರೀಗಂಧದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ಬಾಟಲಿಯಲ್ಲಿ ಹಾಕಿ, ಶೇಕ್ ಮಾಡಿ. ಮಿಶ್ರಣ ದಪ್ಪವಾಗುವವರೆಗೆ ಹೀಗೆ ಮಾಡಿ. ನಂತ್ರ ಕಲೆಯಾದ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ ಒಂದು ಗಂಟೆ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.

For Latest News Updates, Join Our Whatsapp Community🚩
RELATED ARTICLES

Most Popular