HomeHealthಇಂತಹ ʼಆರೋಗ್ಯʼ ಸಮಸ್ಯೆಯಿದ್ದರೆ ಟೊಮೆಟೋ ತಿನ್ನಬೇಡಿ !

ಇಂತಹ ʼಆರೋಗ್ಯʼ ಸಮಸ್ಯೆಯಿದ್ದರೆ ಟೊಮೆಟೋ ತಿನ್ನಬೇಡಿ !

ಪ್ರಸ್ತುತ ದೇಶದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಟೊಮ್ಯಾಟೊ ದುಬಾರಿಯಾಗಿರೋದು ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಟೊಮೆಟೋ ಬೆಲೆ ಕೆಜಿಗೆ 130 ರೂಪಾಯಿಗೆ ತಲುಪಿದ್ದು, ಗೃಹಿಣಿಯರು ಕಂಗಾಲಾಗಿದ್ದಾರೆ.

ಬೆಲೆ ಕಡಿಮೆಯಾಗುವವರೆಗೆ ಟೊಮೆಟೋ ಸೇವನೆ ಮಾಡಲಾಗುತ್ತಿದೆ. ಟೊಮೆಟೋ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಇದ್ದರೆ ಅಪ್ಪಿತಪ್ಪಿಯೂ  ಟೊಮೆಟೋ ಸೇವಿಸಬಾರದು. ಟೊಮೆಟೋ ತಿನ್ನುವುದರಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉರಿಯೂತ – ಆಯುರ್ವೇದದ ತಜ್ಞರ ಪ್ರಕಾರ ಸಂಧಿವಾತ ಸಮಸ್ಯೆ ಇರುವವರು ಅಥವಾ ಉರಿಯೂತ ಇರುವವರು ಟೊಮೆಟೊವನ್ನು ಸೇವಿಸಬಾರದು. ಗ್ಯಾಸ್-ಆಸಿಡಿಟಿಯಿಂದ ಬಳಲುತ್ತಿರುವವರು ಕೂಡ ಟೊಮೆಟೋ ತಿನ್ನುವುದನ್ನು ಸಹ ತ್ಯಜಿಸಬೇಕು. ಅದರಲ್ಲೂ ಹಸಿ ಟೊಮೆಟೋವನ್ನು ಅಪ್ಪಿತಪ್ಪಿಯೂ ತಿನ್ನಬಾರದು.

ಮೂತ್ರಪಿಂಡದ ಕಲ್ಲು – ಯಾರಿಗಾದರೂ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಅವರು ಟೊಮೆಟೋ ತಿನ್ನಬಾರದು. ಕ್ಯಾಲ್ಸಿಯಂ ಆಕ್ಸಲೇಟ್ ಎಂಬ ಅಂಶವು ಟೊಮೆಟೊಗಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಟೊಮೆಟೋ ಬೀಜಗಳು ಹೊಟ್ಟೆಯಲ್ಲಿ ಬೇಗನೆ ಜೀರ್ಣವಾಗುವುದಿಲ್ಲ, ಇವು ಮೂತ್ರಪಿಂಡದಲ್ಲಿ ಹೆಪ್ಪುಗಟ್ಟುತ್ತವೆ.  ಇದರಿಂದಾಗಿ ಕಲ್ಲುಗಳ ಸಮಸ್ಯೆ ಹೆಚ್ಚಾಗುತ್ತದೆ.

ಮುಟ್ಟಿನಲ್ಲಿ ಭಾರೀ ರಕ್ತಸ್ರಾವ – ಋತುಚಕ್ರದ ಅವಧಿಯಲ್ಲಿ ಅಧಿಕ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು ಟೊಮೆಟೋ ಬಳಕೆಯನ್ನು ತಪ್ಪಿಸಬೇಕು. ಟೊಮೆಟೋ ಸೂಪ್, ಟೊಮೆಟೋ  ಸಾಸ್ ಮತ್ತು ಟೊಮೆಟೋ ತಿನ್ನುವುದನ್ನು ತಪ್ಪಿಸಬೇಕು. ಇದನ್ನು ತಿನ್ನುವುದರಿಂದ ದೇಹದಲ್ಲಿ ಪಿತ್ತದೋಷ ಹೆಚ್ಚಾಗುತ್ತದೆ.  ಇದರಿಂದಾಗಿ ರಕ್ತಸ್ರಾವ ಕೂಡ ಹೆಚ್ಚಾಗುತ್ತದೆ.

ಗ್ಯಾಸ್, ಅಸಿಡಿಟಿ ಅಥವಾ ಅಲ್ಸರ್ ಸಮಸ್ಯೆ – ಗ್ಯಾಸ್-ಆಸಿಡಿಟಿಯಿಂದ ಬಳಲುತ್ತಿರುವ ಜನರು ಕೆಂಪು ಟೊಮೆಟೋವನ್ನು ತಿನ್ನಬಾರದು. ಟೊಮ್ಯಾಟೊ ತಿನ್ನುವುದರಿಂದ ದೇಹದ ಜೀರ್ಣಕಾರಿ ಶಕ್ತಿ ನಿಧಾನವಾಗುತ್ತದೆ. ಹುಳಿ ತೇಗು ಮತ್ತು ಎದೆಯುರಿ ಸಮಸ್ಯೆ ಹೆಚ್ಚಾಗಬಹುದು.  

ಚರ್ಮದ ಅಲರ್ಜಿ – ಚರ್ಮದ ಅಲರ್ಜಿ ಅಥವಾ ದೇಹದಲ್ಲಿ ತುರಿಕೆ ಸಮಸ್ಯೆ ಇರುವವರು ಟೊಮೆಟೋ ತಿನ್ನುವುದು ಹಾನಿಕಾರಕ. ಟೊಮ್ಯಾಟೊ, ಆಲೂಗಡ್ಡೆ, ಬದನೆಕಾಯಿ, ಹುಳಿ ಹಣ್ಣುಗಳು, ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಪಿತ್ತ ದೋಷ ಹೆಚ್ಚಾಗುತ್ತದೆ. ಇದರಿಂದಾಗಿ ದೇಹದಲ್ಲಿ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ ಮತ್ತು ತುರಿಕೆ ಪ್ರಾರಂಭವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular