HomeEntertainmentಆಗಸ್ಟ್ 6ಕ್ಕೆ YouTube ನಲ್ಲಿ ಬರಲಿದೆ 'ಪಿಪಾಸು' ಎಂಬ ಕಿರುಚಿತ್ರ

ಆಗಸ್ಟ್ 6ಕ್ಕೆ YouTube ನಲ್ಲಿ ಬರಲಿದೆ ‘ಪಿಪಾಸು’ ಎಂಬ ಕಿರುಚಿತ್ರ

ಇತ್ತೀಚಿಗೆ ಶಾರ್ಟ್ ಫಿಲಂ ಗಳು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಹೊಸ ಕಲಾವಿದರು ಇದರ ಮೂಲಕವೇ   ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಿರು ಚಿತ್ರವೊಂದು ಆಗಸ್ಟ್ 6 ರಂದು ಬೆಳಿಗ್ಗೆ 11:45ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನ್ ಎಂ ಕೆ ನಿರ್ದೇಶಿಸಿರುವ ಈ ಕಿರು ಚಿತ್ರವನ್ನು ವಿಜಯಲಕ್ಷ್ಮಿ ಎಂ ಕೆ ಹಾಗೂ ಶ್ರೀದೇವಿ ನಿರ್ಮಾಣ ಮಾಡಿದ್ದಾರೆ. ಪುನೀತ್ ಧರ್ಮೇಶ್, ದರ್ಶನ್ ಎಂಕೆ, ಚಂದ್ರು, ರಾಜು, ಅಭಿರಾಮ್ ಸೇರಿದಂತೆ ಮೊದಲಾದ ಕಲಾವಿದರು ಈ ಶಾರ್ಟ್ ಫಿಲಂನಲ್ಲಿ ಅಭಿನಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular