HomeEntertainmentಅರ್ಧಂಬರ್ಧ ಪ್ರೇಮಕಥೆ ಚಿತ್ರದ ವಿಡಿಯೋ ಹಾಡು ರಿಲೀಸ್

ಅರ್ಧಂಬರ್ಧ ಪ್ರೇಮಕಥೆ ಚಿತ್ರದ ವಿಡಿಯೋ ಹಾಡು ರಿಲೀಸ್

ಅರವಿಂದ್ ಕೆಪಿ ಮತ್ತು ದಿವ್ಯ ಉರುಡಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅರ್ಧಂಬರ್ಧ’ ಪ್ರೇಮಕಥೆ ಚಿತ್ರದ ಮತ್ತೊಂದು ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ನಿಶಾನ್ ರಾಯ್ ಮತ್ತು ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧ್ವನಿಗೂಡಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಕ್ಸಸ್ ಮೀಡಿಯಾ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಅರವಿಂದ್ ಕೆಪಿ ಮತ್ತು ದಿವ್ಯ ಉರುಡಗ ಸೇರಿದಂತೆ ಅಭಿಲಾಶ್ ದ್ವಾರಕೀಶ್, ಸೂರಜ್ ಹೂಗಾರ್, ಶ್ರೇಯ ಬಾಬು, ಸುಜಿತ್ ಶೆಟ್ಟಿ, ವೆಂಕಟ್ ಶಾಸ್ತ್ರಿ, ಸತೀಶ್ ಬಾಬು, ಗಿರಿಧರ್ ಮಂಜುನಾಥ್, ರಕ್ಷಿತ್, ಲಕ್ಷ್ಮಿ, ಪವನ್ ಶೆಟ್ಟಿ, ಮತ್ತು  ಸ್ನೇಹ ನಂದ ಕಿಶೋರ್ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular