
ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ಕಿಯಾ ಶೋ ರೂಂ ಮುಂಭಾಗ ತಡರಾತ್ರಿ ಹಸುವಿಗೆ ವಾಹನವೊಂದು ಢಿಕ್ಕಿ ಹೊಡೆದು ಹೋಗಿದ್ದು, ಕಾಲು ಮುರಿದುಕೊಂಡು ಸೊಂಟದ ಭಾಗದಲ್ಲಿ ತೀವ್ರ ಹೊಡೆತ ಬಿದ್ದ ಹಸು ರಾತ್ರಿಯಿಂದಲೇ ನರಳುತ್ತ ಬಿದ್ದಿತ್ತು.
ಸ್ಥಳೀಯ ನಂಜಪ್ಪ ಲೇಔಟ್ ನಿವಾಸಿಗಳು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಪಾಲಿಕೆ ಆರೋಗ್ಯ ನಿರೀಕ್ಷಕರಾದ ಲಕ್ಕಣ್ಣ ಹಾಗೂ ಪಶುವೈದ್ಯರಾದ ರಮೇಶ್ ಸ್ಥಳಕ್ಕೆ ಆಗಮಿಸಿ ಹಸುವಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಹಸು ಈಗ ಚೇತರಿಸಿಕೊಂಡಿದ್ದು, ಮಾಲೀಕರು ಅದನ್ನು ಕರೆದುಕೊಂಡು ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
