HomeInternationalಅಚ್ಚರಿ ಮೂಡಿಸುವಂತಿದೆ ಈ ʼಪ್ರೇಮ್‌ ಕಹಾನಿʼ ಯ ಕೊನೆ ಕ್ಷಣದ ಟ್ವಿಸ್ಟ್

ಅಚ್ಚರಿ ಮೂಡಿಸುವಂತಿದೆ ಈ ʼಪ್ರೇಮ್‌ ಕಹಾನಿʼ ಯ ಕೊನೆ ಕ್ಷಣದ ಟ್ವಿಸ್ಟ್

ತನ್ನ ಮನದ ಇನಿಯನನ್ನ ಸರ್ ಪ್ರೈಸ್ ಆಗಿ ಪ್ರಪೋಸ್ ಮಾಡಬೇಕೆಂದು ಪ್ಲಾನ್ ಮಾಡಿದ್ದ ಯುವತಿಗೇ ಅಚ್ಚರಿಯಾದ ಪ್ರೇಮ ನಿವೇದನೆಯ ಕಥೆಯಿದು.

ಓರ್ವ ಯುವತಿ ತನ್ನ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಬೇಕೆಂದು ಅವನೊಂದಿಗೆ ಡಿಸ್ನಿಲ್ಯಾಂಡ್‌ಗೆ ಪ್ರವಾಸಕ್ಕೆ ಹೋಗಿದ್ದಳು. ಒಂದು ನಿರ್ದಿಷ್ಟ ದಿನದಂದು ತನ್ನ ಪ್ರೀತಿಯನ್ನು ಆತನ ಮುಂದೆ ಪ್ರಸ್ತಾಪಿಸಲು ಮೊದಲೇ ಯೋಜಿಸಿದ್ದ ಆಕೆ ಕುಟುಂಬದೊಂದಿಗೆ ಡಿಸ್ನಿಲ್ಯಾಂಡ್ ಗೆ ಹೋಗಿದ್ದಳು.

ಅಲ್ಲಿ ಮಂಡಿಯೂರಿ ಮೊದಲೇ ಯೋಜಿಸಿದ್ದಂತೆ ಉಂಗುರ ತೆಗೆದು ಅವನ ಮುಂದೆ ಪ್ರಪೋಸ್ ಮಾಡಿದ್ದಳು. ಇದನ್ನ ನೋಡಿದ ಸ್ನೇಹಿತ ತಕ್ಷಣವೇ ನಗುತಡೆಯಲಾಗದೇ ಜೋರಾಗಿ ನಗಲು ಪ್ರಾರಂಭಿಸಿದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಕಾರಣ ಅವನೂ ಕೂಡ ಆಕೆಗೆ ಪ್ರಪೋಸ್ ಮಾಡಲು ಉಂಗುರ ತೆಗೆದುಕೊಂಡು ಬಂದಿದ್ದ. ನಗುತ್ತಾ ತನ್ನ ಜೇಬಿನಲ್ಲಿ ಬಚ್ಚಿಟ್ಟಿದ ಉಂಗುರದ ಹೊರತೆಗೆಯುತ್ತಾನೆ. ಈ ವೇಳೆ ಅವರಿಬ್ಬರೂ ತಮ್ಮ ಯೋಜನೆಯ ಬಗ್ಗೆ ಯಾವುದೇ ಸುಳಿವಿಲ್ಲದೇ ಇಷ್ಟು ದಿನ ಪ್ಲಾನ್ ಮಾಡುತ್ತಿದ್ದರು ಎಂದು ಎಲ್ಲರಿಗೂ ಅರಿವಾಗುತ್ತದೆ. ಬಳಿಕ ಇಬ್ಬರೂ ಒಂದೇ ಸ್ಥಳದಲ್ಲಿ ಮೊಣಕಾಲಿನ ಮೇಲೆ ಕೂತು ಪರಸ್ಪರ ಉಂಗುರ ಬದಲಿಸಿಕೊಂಡು ಚುಂಬಿಸಿದ್ದಾರೆ. ಈ ಪ್ರೇಮನಿವೇದನೆಯ ವಿಡಿಯೋ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular