
ಈ ಮೊದಲು ಯೋಜನೆಯಡಿ ನಿವೇಶನ ಹಕ್ಕುಪತ್ರ ಪಡೆದವರಿಗೆ ಇದನ್ನು ಅಡಮಾನ ಮಾಡಬಾರದೆಂಬ ಷರತ್ತನ್ನು ವಿಧಿಸಲಾಗಿತ್ತು. ಅಲ್ಲದೆ ಇದನ್ನು ಹಕ್ಕುಪತ್ರದಲ್ಲಿ ಸಹ ಮುದ್ರಿಸಲಾಗಿತ್ತು. ಹೀಗಾಗಿ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆಯಲು ಹೋದರೆ ತೊಂದರೆಯಾಗುತ್ತಿತ್ತು.
ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ ಇದೀಗ ಗೃಹ ನಿರ್ಮಾಣ ಅಡಮಾನ ಸಾಲಕ್ಕೆ ಯಾವುದೇ ನಿರ್ಬಂಧ ವಿಧಿಸದೆ ಬ್ಯಾಂಕಿನಲ್ಲಿ ಸಾಲ ನೀಡುವಂತೆ ಆದೇಶ ಹೊರಡಿಸಲಾಗಿದೆ. ಹೀಗಾಗಿ ಅಕ್ರಮ – ಸಕ್ರಮ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ಬ್ಯಾಂಕುಗಳಿಂದ ಅಡಮಾನ ಸಾಲ ಪಡೆಯುವ ಅವಕಾಶ ಲಭ್ಯವಾದಂತಾಗಿದೆ.

