HomeBusinessಅಂಚೆ ಕಚೇರಿಯ ಈ ಸ್ಕೀಮ್‌ನಲ್ಲಿ 5000 ರೂ. ಹೂಡಿಕೆ ಮಾಡಿದ್ರೆ ಆಗಬಹುದು ಮಿಲಿಯನೇರ್‌...!

ಅಂಚೆ ಕಚೇರಿಯ ಈ ಸ್ಕೀಮ್‌ನಲ್ಲಿ 5000 ರೂ. ಹೂಡಿಕೆ ಮಾಡಿದ್ರೆ ಆಗಬಹುದು ಮಿಲಿಯನೇರ್‌…!

ಪೋಸ್ಟ್ ಆಫೀಸ್‌ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಸುರಕ್ಷಿತ ಹೂಡಿಕೆಗೆ ಪೋಸ್ಟ್‌ ಆಫೀಸ್‌ ಉತ್ತಮ ಆಯ್ಕೆಗಳಲ್ಲೊಂದು. ಉತ್ತಮ ಆದಾಯದ ಜೊತೆಗೆ, ಹಣ ಹಿಂತಿರುಗಿಸುವ ಗ್ಯಾರಂಟಿ ಸಹ ಇಲ್ಲಿದೆ. ಪೋಸ್ಟ್ ಆಫೀಸ್‌ನಲ್ಲಿರುವ ಆರ್‌ಡಿ ಸ್ಕೀಮ್‌ನಲ್ಲಿ 5,000 ರೂಪಾಯಿ ಹೂಡಿಕೆ ಮಾಡಿದ್ರೆ ನೀವು ಮಿಲಿಯನೇರ್ ಆಗಬಹುದು.

ಪ್ರಸ್ತುತ ಅಂಚೆ ಕಛೇರಿಯ 5 ವರ್ಷಗಳ ಆರ್‌ಡಿಯಲ್ಲಿ ಶೇಕಡಾ 5.8ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀವು ಕನಿಷ್ಠ 100 ರೂಪಾಯಿ ಹೂಡಿಕೆ ಮಾಡಬೇಕು. ಇದರಲ್ಲಿ ನೀವು ಒಂದೇ ಖಾತೆಯನ್ನು ತೆರೆಯಬಹುದು ಅಥವಾ ಮೂವರು ವಯಸ್ಕರು ಒಟ್ಟಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ನೀವು ಹಣವನ್ನು 10ರ ಗುಣಕಗಳಲ್ಲಿ ಠೇವಣಿ ಮಾಡಬೇಕು. ಸಮಯಕ್ಕೆ ಸರಿಯಾಗಿ ಹಣ ಜಮಾ ಮಾಡಬೇಕು. ಕಂತು ನೀಡಲು ವಿಳಂಬ ಮಾಡಿದರೆ ಅಥವಾ ಮರೆತರೆ ವಿಳಂಬ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಯೋಜನೆಯಲ್ಲಿ ಪ್ರತಿ ತಿಂಗಳು 5000 ರೂಪಾಯಿಗಳನ್ನು ಠೇವಣಿ ಮಾಡಿದರೆ ಶೇಕಡಾ 5.8ರ ದರದಲ್ಲಿ ಬಡ್ಡಿ ಸಿಗುತ್ತದೆ. 5 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಿದರೆ 3,48,480 ರೂಪಾಯಿ ಆಗುತ್ತದೆ. ಇದರಲ್ಲಿ ನಿಮ್ಮ ಠೇವಣಿ ಮೊತ್ತ 3 ಲಕ್ಷ ರೂಪಾಯಿ. ಇದರ ಮೇಲೆ ಸುಮಾರು 16 ಪ್ರತಿಶತದಷ್ಟು ಲಾಭವನ್ನು ಪಡೆಯುತ್ತೀರಿ. ನಿಯಮಗಳ ಪ್ರಕಾರ ನೀವು ಈ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಿದರೆ ನಂತರ ನಿಮ್ಮ RD 10 ವರ್ಷಗಳವರೆಗೆ ಇರುತ್ತದೆ. ಇದರಲ್ಲಿ ನೀವು ಮೆಚ್ಯೂರಿಟಿಯಲ್ಲಿ 8,13,232 ರೂಪಾಯಿಗಳನ್ನು ಪಡೆಯುತ್ತೀರಿ. ಇದರಲ್ಲಿ ಒಟ್ಟು ಠೇವಣಿ ಮೊತ್ತವು 6 ಲಕ್ಷ ರೂಪಾಯಿ ಆಗಿರುತ್ತದೆ. ಉಳಿದ ಮೊತ್ತ ಬಡ್ಡಿ ರೂಪದಲ್ಲಿ ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular