HomeBusinessʼಗೃಹ ಸಾಲʼ ದ ಹೊರೆ ಕಡಿಮೆ ಮಾಡಲು ಸರಿಯಾದ ಸಮಯ ಯಾವುದು ? ಇಲ್ಲಿದೆ ಮರುಪಾವತಿ...

ʼಗೃಹ ಸಾಲʼ ದ ಹೊರೆ ಕಡಿಮೆ ಮಾಡಲು ಸರಿಯಾದ ಸಮಯ ಯಾವುದು ? ಇಲ್ಲಿದೆ ಮರುಪಾವತಿ ಟಿಪ್ಸ್‌

ಗೃಹ ಸಾಲ ದೊಡ್ಡ ಆರ್ಥಿಕ ಜವಾಬ್ದಾರಿ. ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು. ಕಳೆದ ಕೆಲವು ತಿಂಗಳುಗಳಿಂದ ಆರ್‌.ಬಿ.ಐ. ಸಾಲದ ಬಡ್ಡಿ ದರವನ್ನು ಹಲವು ಬಾರಿ ಹೆಚ್ಚಿಸಿದೆ. ಸದ್ಯ ಸಾಲದ ಬಡ್ಡಿ ಶೇ.6.5 ರಿಂದ ಶೇ.9 ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ 2020ರ ಅವಧಿಯಲ್ಲಿ ತೆಗೆದುಕೊಂಡ ಗೃಹ ಸಾಲದ ಅವಧಿಯು ಏಪ್ರಿಲ್‌ನಲ್ಲಿ 30 ರಿಂದ 32 ವರ್ಷಗಳಿಗೆ ಹೆಚ್ಚಾಗಿದೆ. ಹಾಗಾಗಿ ಆದಷ್ಟು ಬೇಗ ಗೃಹಸಾಲವನ್ನು ತೀರಿಸುವುದು ಉತ್ತಮ.

ಗೃಹ ಸಾಲದ ಹೊರೆಯನ್ನು ಕಡಿಮೆ ಮಾಡಲು ದೀರ್ಘಾವಧಿಯ ಬದಲಿಗೆ ಕೇವಲ 10 ರಿಂದ 15 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ನೀವು ಹೆಚ್ಚು ಬಡ್ಡಿಯನ್ನು ಪಾವತಿಸಬೇಕಾಗಿಲ್ಲ ಮತ್ತು ಸಾಲವನ್ನು ಸಹ ಮರುಪಾವತಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಬಳಿ ಹಣವಿದ್ದಾಗ ಪೂರ್ವಪಾವತಿ ಮಾಡಿ. ಈ ಮೂಲಕ ಸಾಲದ 60 ರಿಂದ 70 ಪ್ರತಿಶತವನ್ನು ಪಾವತಿಸಬಹುದು. ಇದು EMI ಹೊರೆಯನ್ನು ಕಡಿಮೆ ಮಾಡುತ್ತದೆ. ಲೋನ್ ಮೊತ್ತವನ್ನು ಕಡಿಮೆ ಮಾಡುವ ಮೂಲಕ EMI ಅನ್ನು ಹೆಚ್ಚಿಸುವುದರತ್ತ ಗಮನಹರಿಸಿ. ಇದರಿಂದ ಸಾಲವನ್ನು ಆದಷ್ಟು ಬೇಗ ಮರುಪಾವತಿ ಮಾಡಬಹುದು.

ಆದಾಯ ಹೆಚ್ಚಾದಂತೆ EMI ಅನ್ನು ಹೆಚ್ಚಿಸಬಹುದು. 20 ವರ್ಷಗಳವರೆಗೆ ಶೇಕಡಾ 7.5 ರಂತೆ 40 ಲಕ್ಷದ ಗೃಹ ಸಾಲದ ಮೇಲೆ ಇಎಂಐ ಅನ್ನು 5,000 ರೂಪಾಯಿ ಹೆಚ್ಚಿಸುವ ಮೂಲಕ, ಸುಮಾರು 8 ಲಕ್ಷ ರೂಪಾಯಿಯನ್ನು ಬಡ್ಡಿ ವೆಚ್ಚದಲ್ಲಿ ಉಳಿಸಬಹುದು. ಏಳು ವರ್ಷ ಮೊದಲೇ ಸಾಲ ಮುಕ್ತರಾಗಬಹುದು. ತಜ್ಞರ ಪ್ರಕಾರ ಹೆಚ್ಚುವರಿ ಹಣವನ್ನು ಹೊಂದಿರುವಾಗ ಮಾತ್ರ ಸಾಲದ ಪೂರ್ವಪಾವತಿಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಬೇಗ ಸಾಲವನ್ನು ಮರುಪಾವತಿ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular