HomeKarnatakaBREAKING NEWS: ಶಿವಮೊಗ್ಗದಲ್ಲಿ 2ನೇ ಝೀಕಾ ವೈರಸ್ ಪತ್ತೆ; ಯುವಕನಲ್ಲಿ ಸೋಂಕು ದೃಢ

BREAKING NEWS: ಶಿವಮೊಗ್ಗದಲ್ಲಿ 2ನೇ ಝೀಕಾ ವೈರಸ್ ಪತ್ತೆ; ಯುವಕನಲ್ಲಿ ಸೋಂಕು ದೃಢ

ಶಿವಮೊಗ್ಗ: ರಾಜ್ಯದಲ್ಲಿ ಡೆಂಘೀ ಅಟ್ಟಹಾಸದ ನಡುವೆ ಇದೀಗ ಮಹಾಮಾರಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ವೈರಸ್ ಮೊದಲ ಬಲಿ ಪಡೆದಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಝೀಕಾ ಪ್ರಕರಣ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಯುವಕರೊಬ್ಬರಲ್ಲಿ ಝೀಕಾ ಸೋಂಕು ದೃಢಪಟ್ಟಿದೆ. ಟ್ರಾವೆಲ್ ಹಿಸ್ಟ್ರಿ ಇಲ್ಲದ ಯುವಕನಿಗೆ ಝೀಕಾ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯ ಸಾಗರ ತಾಲೂಕಿನ ಗಾಂಧಿನಗರದ ಯುವಕನಲ್ಲಿ ಝೀಕಾ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗದ ಗಾಂಧಿನಗರದಲ್ಲಿ ಝೀಕಾ ವೈರಸ್ ಗೆ 74 ವರ್ಷದ ವೃದ್ಧ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಸಾಗರದ ಯುವಕನಲ್ಲಿ ಝೀಕಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular