ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತವೊಂದರ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ ನಿಮ್ಮ ಕಣ್ಣುಗಳನ್ನೇ ನೀವು ನಂಬಲಾರಿರಿ, ಖಚಿತವಾಗಿಯೂ ನೀವು ಈ ವಿಡಿಯೋವನ್ನು ಎರಡು ಮೂರು ಬಾರಿ ನೋಡುವುದು ಗ್ಯಾರಂಟಿ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯ ಬದಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುತ್ತಾನೆ. ಅಷ್ಟರಲ್ಲಿ ಅತಿ ವೇಗವಾಗಿ ಬಂದ ಕಾರೊಂದು ಆತನ ಬೈಕ್ಗೆ ಡಿಕ್ಕಿ ಹೊಡೆಯುತ್ತದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಾಳಿಯಲ್ಲಿ ಎಗರಿ ಬೀಳುತ್ತಾನೆ.
ಸಾಮಾನ್ಯವಾಗಿ ಇಂತಹ ಭೀಕರ ಡಿಕ್ಕಿಯ ನಂತರ ವ್ಯಕ್ತಿ ರಸ್ತೆಯ ಮೇಲೆ ಬಿದ್ದು ತೀವ್ರವಾಗಿ ಗಾಯಗೊಳ್ಳಬೇಕಿತ್ತು. ಆದರೆ ಇಲ್ಲಿ ನಡೆದಿದ್ದೇ ಬೇರೆ! ಗಾಳಿಯಲ್ಲಿ ಹಾರಿದ ಆ ವ್ಯಕ್ತಿ, ಯಾವುದೋ ಸಿನಿಮಾದ ಹೀರೋನಂತೆ ಲೀಲಾಜಾಲವಾಗಿ ತನ್ನ ಕಾಲಿನ ಮೇಲೆ ಕೆಳಕ್ಕೆ ಇಳಿಯುತ್ತಾನೆ. ಆತನಿಗೆ ಯಾವುದೇ ಗಾಯಗಳಾಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗುತ್ತಾನೆ. ಕಾರು ಚಾಲಕ ಅಲ್ಲಿಂದ ತಕ್ಷಣವೇ ಪರಾರಿಯಾಗುತ್ತಾನೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋವನ್ನು ‘X’ ಪ್ಲಾಟ್ಫಾರ್ಮ್ನಲ್ಲಿ @rastrvadi_4 ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ:ಒಬ್ಬ ಬಳಕೆದಾರರು “ಯಮರಾಜ ಇಂದು ರಜೆಯಲ್ಲಿದ್ದ ಹಾಗಿದೆ” ಎಂದು ಬರೆದಿದ್ದಾರೆ.ಮತ್ತೊಬ್ಬರು “ಖಂಡಿತವಾಗಿಯೂ ಅದೃಷ್ಟವೇ ಈತನನ್ನುಕಾಪಾಡಿದೆ” ಎಂದಿದ್ದಾರೆ.ಇನ್ನು ಕೆಲವರು “ಅದ್ಭುತ ಅದೃಷ್ಟ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

