ತಮಿಳುನಾಡಿನ ಕಾಂಚಿಪುರಂ ಬಳಿಯಲ್ಲಿ ಭಾನುವಾರ ನಡೆದ ಬೈಕ್ ಸ್ಟಂಟ್ನಲ್ಲಿ ಮೋಟೋ ವ್ಲಾಗರ್ ಕೂಡ ಆಗಿರುವ ಯುಟ್ಯೂಬರ್ ಟಿಟಿಎಫ್ ವಾಸನ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಕಾಂಚಿಪುರಂ ಜಿಲ್ಲೆ ಬಳಿ ಇರುವ ಚೆನ್ನೈ – ಬೆಂಗಳೂರು ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಯುಟ್ಯೂಬರ್ ಬೈಕ್ ಸ್ಟಂಟ್ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಆದರೆ ಬೈಕ್ ಸ್ಟಂಟ್ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ್ದು ಪರಿಣಾಮ ವಾಸನ್ ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಸರ್ವೀಸ್ ರಸ್ತೆಯಲ್ಲಿ ಅತೀವೇಗದ ಬೈಕ್ ಸ್ಟಂಟ್ ಮಾಡಲು ಯತ್ನಿಸುತ್ತಿರೋದನ್ನ ಸ್ಪಷ್ಟವಾಗಿ ತೋರಿಸಲಾಗಿದೆ.
ಸರ್ವೀಸ್ ರಸ್ತೆಯಲ್ಲಿ ಒಂದು ಬದಿಯಲ್ಲಿ ಜಮೀನು ಇರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಯುಟ್ಯೂಬರ್ ಮುಂಭಾಗದ ಟೈರ್ನ್ನು ಎತ್ತುವ ಮೂಲಕ ಸಾಹಸ ಪ್ರದರ್ಶಿಸಬೇಕು ಎನ್ನುಷ್ಟರಲ್ಲಿ ಅವರು ಸಮತೋಲನ ಕಳೆದುಕೊಂಡಿದ್ದಾರೆ. ಪರಿಣಾಮ ಬೈಕು ಜಮೀನಿಗೆ ನುಗ್ಗಿದೆ.
ಘಟನೆಯ ವಿಡಿಯೋದಲ್ಲಿ ಸರ್ವೀಸ್ ರಸ್ತೆಯಲ್ಲಿ ಅತೀವೇಗದ ಬೈಕ್ ಸ್ಟಂಟ್ ಮಾಡಲು ವಾಸನ್ ಯತ್ನಿಸುತ್ತಿರೋದು ಸ್ಪಷ್ಟವಾಗಿದೆ. ಯುಟ್ಯೂಬರ್ ಬೈಕ್ ಸಮೇತ ಗದ್ದೆಗೆ ಹಾರಿದ ಬಳಿಕವೂ ಹೊಲದಲ್ಲಿ ಬೈಕ್ ಮುಂದೆ ಹೋಗಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
BREAKING: Popular YouTuber #TTFVasan met with an accident. pic.twitter.com/3UEuasmnFg
— Manobala Vijayabalan (@ManobalaV) September 17, 2023

