HomeBeautyಸುಲಭವಾಗಿ ಬೆಳ್ಳಗಾಗಲಿದೆ ನಿಮ್ಮ ʼಅಂಡರ್‌ ಆರ್ಮ್ʼ

ಸುಲಭವಾಗಿ ಬೆಳ್ಳಗಾಗಲಿದೆ ನಿಮ್ಮ ʼಅಂಡರ್‌ ಆರ್ಮ್ʼ

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ ನಿಮಗೂ ಇದ್ದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಕಂಕುಳನ್ನು ಬೆಳ್ಳಗೆ ಮಾಡಿಕೊಳ್ಳುವ ಟಿಪ್ಸ್ ಇಲ್ಲಿದೆ.

ಇದಕ್ಕೆ ಬೇಕಾಗುವ ಪದಾರ್ಥ:

2 ಚಮಚ ಕಡಲೆಹಿಟ್ಟು, 1 ಚಮಚ ಮೊಸರು, 1 ಚಿಟಕಿ ಅರಿಶಿನ, ನಿಂಬೆ ರಸ 5 ಹನಿ. ಸ್ವಲ್ಪ ತೆಂಗಿನ ಎಣ್ಣೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಪ್ಲೇಟ್ ಗೆ ಮೊಸರು, ಕಡಲೆ ಹಿಟ್ಟು, ನಿಂಬೆ ರಸ, ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕಂಕುಳಿಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕಂಕುಳನ್ನು ತೊಳೆಯಿರಿ. ಕಂಕುಳನ್ನು ಮೃದು ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ರಾತ್ರಿ ಮಲಗುವ ಮುನ್ನ ಹೀಗೆ ಮಾಡಬೇಕು.

For Latest News Updates, Join Our Whatsapp Community🚩
RELATED ARTICLES

Most Popular