HomeKarnatakaಈ ಆಕ್ಸಿಡೆಂಟ್ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..! ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರು

ಈ ಆಕ್ಸಿಡೆಂಟ್ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..! ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರು

ತುಮಕೂರು ಜಿಲ್ಲೆಯಲ್ಲಿ ಅಪಘಾತವೊಂದು ನಡೆದಿದೆ. ಈ ಅಪಘಾತ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಅದೃಷ್ಟವಶಾತ್ ಆ ಯುವಕ ಬದುಕುಳಿದಿದ್ದಾನೆ. ಈ ಭೀಕರ ಅಪಘಾತ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಹೌದು, ಕುಣಿಗಲ್ ತಾಲೂಕಿನ ಅಂಚೆಪಾಳ್ಯದ ಹೋಟೆಲ್ ಮುಂಭಾಗ ಈ ಘಟನೆ ನಡೆದಿದೆ. ಮನು ಎಂಬಾತ ಕೆಲಸದ ಹಿನ್ನೆಲೆ ಈ ಹೋಟೆಲ್ ಮುಂಭಾಗದ ರಸ್ತೆ ಮುಂದೆ ಬೈಕ್ ಮೇಲೆ ಕುಳಿತಿದ್ದಾನೆ. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಒಂದು ವೇಗವಾಗಿ ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡ ಬದಿಗೆ ಅತಿ ವೇಗವಾಗಿ ನುಗ್ಗಿದೆ. ಇದನ್ನು ಗಮನಿಸಿದ ಯುವಕ ಕ್ಷಣಾರ್ಧದಲ್ಲಿ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕ್ಯಾಂಟರ್ ಗುದ್ದಿದ ಪರಿಣಾಮ ಬೈಕ್ ಸಂಪೂರ್ಣ ಜಖಂಗೊಂಡಿದೆ. ಯುವಕ ತಕ್ಷಣ ಎಚ್ಚೆತ್ತುಕೊಂಡಿದ್ದಕ್ಕೆ ಆತನ ಪ್ರಾಣ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿದಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆತ ಬದುಕುಳಿದಿದ್ದೇ ಒಂದು ದೊಡ್ಡ ಪವಾಡ ಅಂತಿದ್ದಾರೆ ನೋಡಿದವರು.

For Latest News Updates, Join Our Whatsapp Community🚩
RELATED ARTICLES

Most Popular