HomeKarnatakaBIG NEWS: ಲಾಡ್ಜ್ ರೂಂ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಯುವಕ

BIG NEWS: ಲಾಡ್ಜ್ ರೂಂ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಯುವಕ

ಧಾರವಾಡ: ಯುವಕನೊಬ್ಬ ಲಾಡ್ಜ್ ರೂಂ ನಲ್ಲಿಯೇ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ರೈಲ್ವೆ ನಿಲ್ದಾಣ ಬಳಿಯ ಶ್ರೀನಿವಾಸ್ ಲಾಡ್ಜ್ ನಲ್ಲಿ ನಡೆದಿದೆ.

ಚಿನ್ಮಯ್ ಎಸ್.ಜಿ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಶ್ರೀನಿವಾಸ್ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡಿದ್ದ. ರೂಂ ಕ್ಲೀನ್ ಮಾಡಲೆಂದು ಲಾಡ್ಜ್ ಸಿಬ್ಬಂದಿ ಹೋಗಿದ್ದಾರೆ. ರೂಂ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು, ಆದರೂ ಬಾಗಿಲು ತೆರೆದಿಲ್ಲ. ಮಾರನೇ ದಿನ ಮತ್ತೆ ಹೋಗಿ ನೋಡಿದಾಗಲೂ ಬಾಗಿಲು ತೆರೆದಿಲ್ಲ. ಈ ವೇಳೆ ಅನುಮಾನಗೊಂಡು ಮತ್ತೊಂದು ಬೀಗ ಬಳದ್ಸಿ ಲಾಕ್ ಓಪನ್ ಮಾಡಿ ನೋಡಿದಾಗ ಯುವಕ ಶವವಾಗಿ ಬಿದ್ದಿದ್ದ. ಪ್ರೇಮ ವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular