HomeKarnatakaBREAKING NEWS: ಬ್ಯಾಂಕ್ ಸಿಬ್ಬಂದಿಯಿಂದ ಮನೆ ಸೀಜ್: ಯುವಕ ಆತ್ಮಹತ್ಯೆಗೆ ಯತ್ನ

BREAKING NEWS: ಬ್ಯಾಂಕ್ ಸಿಬ್ಬಂದಿಯಿಂದ ಮನೆ ಸೀಜ್: ಯುವಕ ಆತ್ಮಹತ್ಯೆಗೆ ಯತ್ನ

ಗದಗ: ರಾಷ್ಟ್ರೀಕೃತ ಬ್ಯಾಂಕ್ ನಿಂದ ಮನೆ ಸೀಜ್ ಮಾಡಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ರಂಭಾಪುರಿ ಆಶ್ರಯ ಬಡಾವಣೆಯಲ್ಲಿ ನಡೆದಿದೆ.

ರವಿ ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ಮನೆ ಸೀಜ್ ಮಾಡಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಯುವಕನನ್ನು ಆಸ್ಪತೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ಸ್ಥಳಂತರಿಸಲಾಗಿದೆ.

2017ರಲ್ಲಿ ರವಿ ಆಶ್ರಯ ಮನೆ ಕಟ್ಟಿಸಿಕೊಳ್ಳಲು 3 ಲಕ್ಷ ರೂಪಾಯಿ ಸಾಲ ಪಡೆದಿದ್ದ. 3 ವರ್ಷ 2 ಲಕ್ಷ ರೂಪಾಯಿ ಸಾಲ ತೀರಿಸಿದ್ದ. ಕೋವಿಡ್ ಬಳಿಕ ಕಂತು ಕಟ್ಟಲಾಗದೇ 1 ಲಕ್ಷ ಬಾಕಿ ಇತ್ತು. 1 ಲಕ್ಷ ಬಾಕಿ ಹಣಕ್ಕೆ ಈಗ ಬ್ಯಾಂಕ್ ಸಿಬ್ಬಂದಿ ಮನೆಯ ಸಾಮಾನುಗಳನ್ನು ಹೊರ ಹಾಕಿ ಮನೆಯನ್ನೇ ಸೀಜ್ ಮಾಡಿ ಹೋಗಿದ್ದರು. ಅಲ್ಲದೇ 5 ಲಕ್ಷ ಬಾಕಿ ಇದೆ ಎಂದು ಬ್ಯಾಂಕ್ ನಿಂದ ನೋಟಿಸ್ ನೀಡಿದ್ದಾರೆ. ಇದರಿಂದ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular