HomeLatest Newsಅನ್ ಲೋಡ್ ವೇಳೆ ಗೊಬ್ಬರದ ಮೂಟೆ ಮೈಮೇಲೆ ಬಿದ್ದು ಯುವಕ ಸಾವು

ಅನ್ ಲೋಡ್ ವೇಳೆ ಗೊಬ್ಬರದ ಮೂಟೆ ಮೈಮೇಲೆ ಬಿದ್ದು ಯುವಕ ಸಾವು

ಚಿಕ್ಕಮಗಳೂರು: ಅನ್ಲೋಡ್ ಮಾಡುವಾಗ ಗೊಬ್ಬರದ ಮೂಟೆ ಮೈಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ಗೇರುಬೈಲಿನಲ್ಲಿ ನಡೆದಿದೆ.

ಕರ್ಕೇಶ್ವರ ಗ್ರಾಮದ ನಿವಾಸಿ ಮೇಲ್ಪಾಲ್ ನ ಪೂರ್ಣೇಶ್(27) ಮೃತಪಟ್ಟ ಯುವಕ. ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪೂರ್ಣೇಶ್ ಕೆಲಸ ಮಾಡುತ್ತಿದ್ದು, ಗುರುವಾರ ಕೃಷಿ ಸಂಘದಿಂದ ಖಾಸಗಿ ಎಸ್ಟೇಟ್ ಗೆ ನೀಡಲು ಗೊಬ್ಬರದ ಮೂಟೆಗಳನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಪಿಕ್ ಅಪ್ ವಾಹನದಿಂದ ಗೊಬ್ಬರದ ಮೂಟೆ ಆನ್ ಲೋಡ್ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕುಸಿದಿದ್ದಾರೆ. ಈ ವೇಳೆ ಅವರ ಕುತ್ತಿಗೆಯ ಮೇಲೆ ಗೊಬ್ಬರದ ಮೂಟೆ ಬಿದ್ದು ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular