HomeKarnatakaಹಣ ವಾಪಾಸ್ ಕೇಳಿದ್ದಕ್ಕೆ ಮೂವರು ಸ್ನೇಹಿತರ ಮೇಲೆ ಗುಂಡಿನ ದಾಳಿ: ಓರ್ವ ಸಾವು

ಹಣ ವಾಪಾಸ್ ಕೇಳಿದ್ದಕ್ಕೆ ಮೂವರು ಸ್ನೇಹಿತರ ಮೇಲೆ ಗುಂಡಿನ ದಾಳಿ: ಓರ್ವ ಸಾವು

ನವದೆಹಲಿ: ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಮೂವರು ಸ್ನೇಹಿತರ ಮೇಲೆ ಅಪ್ರಾಪ್ತ ಬಾಲಕರು ಗುಂಡಿನ ದಾಳಿ ನಡೆಸಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ಕಬೀರ್ ನಗರದಲ್ಲಿ ನಡೆದಿದೆ.

ನದೀಮ್ ಮೃತ ಯುವಕ. ನದೀಮ್ ಹಾಗೂ ಆತನ ಸ್ನೇಹಿತರು ಊಟಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಮೂವರು ಅಪ್ರಾಪ್ತರು 13 ಸುತು ಗುಮ್ಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ನದೀಮ್ ಹಾಗೂ ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಿಸದೇ ನದೀಮ್ ಸಾವನ್ನಪ್ಪಿದ್ದಾನೆ. ಇಬ್ಬರು ಸ್ನೇಹಿತರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ನದೀಮ್ ನಿಂದ ಸಾಲ ಪಡೆದುಕೊಂಡಿದ್ದ. ಕೊಟ್ಟ ಹಣ ವಾಪಾಸ್ ನೀಡುವಂತೆ ನದೀಮ್ ಒತ್ತಡ ಹಾಕಿದ್ದನಂತೆ. ಇದೇ ಕಾರಣಕ್ಕಾಗಿ ಗುಂಡಿಟ್ಟು ನದೀಮ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ಇನ್ನು ಬಂಧಿತರು ದೆಹಲಿಯ ಜ್ಯೋತಿ ನಗರದಲ್ಲಿ ನಡೆದ ಗುಂಡಿ ದಾಳಿಗೂ ಸಂಬಂಧ ಹೊಂದಿದ್ದಾರೆ. ಬಂಧಿತರಿಂದ ಮೂರು ಕಂಟ್ರಿ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular