HomeEntertainmentಸ್ಯಾಂಡಲ್‌ವುಡ್ ಮಾಂತ್ರಿಕ ಯೋಗರಾಜ್ ಭಟ್‌ಗೆ ಜನ್ಮದಿನದ ಸಂಭ್ರಮ: 'ಮುಂಗಾರು ಮಳೆ' ನಿರ್ದೇಶಕನ ಯಶೋಗಾಥೆ

ಸ್ಯಾಂಡಲ್‌ವುಡ್ ಮಾಂತ್ರಿಕ ಯೋಗರಾಜ್ ಭಟ್‌ಗೆ ಜನ್ಮದಿನದ ಸಂಭ್ರಮ: ‘ಮುಂಗಾರು ಮಳೆ’ ನಿರ್ದೇಶಕನ ಯಶೋಗಾಥೆ

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಸಂಭಾಷಣೆ, ಭಾವನಾತ್ಮಕ ನಿರೂಪಣೆ ಹಾಗೂ ಪ್ರಾಸಬದ್ಧ ಗೀತೆಗಳ ಮೂಲಕ ಕೋಟ್ಯಂತರ ಕನ್ನಡಿಗರ ಮನಗೆದ್ದಿರುವ ಖ್ಯಾತ ಚಲನಚಿತ್ರ ನಿರ್ದೇಶಕ, ಸಾಹಿತಿ ಹಾಗೂ ನಿರ್ಮಾಪಕ ಯೋಗರಾಜ್ ಭಟ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1972ರ ಅಕ್ಟೋಬರ್ 8ರಂದು ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಜನಿಸಿದ ಇವರು, ಹಾವೇರಿ ಜಿಲ್ಲೆಯ ತಿಲವಳ್ಳಿಯಲ್ಲಿ ಬೆಳೆದು ಸ್ಯಾಂಡಲ್‌ವುಡ್‌ನ ಪ್ರಮುಖ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ಸ್ಯಾಂಡಲ್‌ವುಡ್ ಇತಿಹಾಸ ಬರೆದ ‘ಮುಂಗಾರು ಮಳೆ’:

ಯೋಗರಾಜ್ ಭಟ್ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲು ತಂದುಕೊಟ್ಟಿದ್ದು 2006ರಲ್ಲಿ ತೆರೆಕಂಡ ‘ಮುಂಗಾರು ಮಳೆ’ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ಯಶಸ್ಸು ಕಂಡ ಈ ಸಿನಿಮಾ, ಅಂದು ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ಸಕಲ ದಾಖಲೆಗಳನ್ನು ಉಡಾಯಿಸಿತ್ತು. ಅತ್ಯಂತ ಸುದೀರ್ಘ ಅವಧಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನಗೊಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರವು ಒಂಬತ್ತು ರಾಜ್ಯ ಪ್ರಶಸ್ತಿಗಳು ಹಾಗೂ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ನಂತರ ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಗೆ ಹಾಗೂ ಬೆಂಗಾಲಿಗೆ ರೀಮೇಕ್ ಆಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂಗಾರು ಮಳೆ ಬಳಿಕ ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’, ‘ಪರಮಾತ್ಮ’, ‘ಡ್ರಾಮಾ’, ‘ವಾಸ್ತು ಪ್ರಕಾರ’, ‘ದನ ಕಾಯೋನು’, ‘ಮುಗುಳುನಗೆ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಯೋಗರಾಜ್ ಭಟ್ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಅಪರೂಪದ ಸಾಹಿತ್ಯದ ಜಾದೂಗಾರ:

ಕೇವಲ ನಿರ್ದೇಶನ ಮಾತ್ರವಲ್ಲದೆ ಗೀತರಚನೆಕಾರರಾಗಿಯೂ ಯೋಗರಾಜ್ ಭಟ್ ಸ್ಯಾಂಡಲ್‌ವುಡ್‌ನಲ್ಲಿ ವಿಶೇಷ ಮುದ್ರೆ ಒತ್ತಿದ್ದಾರೆ. ‘ಜಾಕಿ’, ‘ಹುಡುಗರು’, ‘ಕಡ್ಡಿಪುಡಿ’, ‘ಬಚ್ಚನ್’, ‘ಅಧ್ಯಕ್ಷ’, ‘ಗಜಕೇಸರಿ’, ‘ರಾಜಹುಲಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಿಗೆ ಇವರು ಬರೆದ ಹಾಡುಗಳು ಸೂಪರ್ ಹಿಟ್ ಆಗಿವೆ. ‘ಡ್ರಾಮಾ’ ಸಿನಿಮಾದ ‘ಬೊಂಬೆ ಆಡ್ಸೋನು’ ಹಾಡಿನ ಅತ್ಯುತ್ತಮ ಸಾಹಿತ್ಯಕ್ಕಾಗಿ ಇವರಿಗೆ ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ.

ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ನೀಡಿ, ಹೊಸ ಅಲೆ ಎಬ್ಬಿಸಿದ ಈ ಸ್ಯಾಂಡಲ್‌ವುಡ್ ಭಟರಿಗೆ ರಾಜ್ಯಾದ್ಯಂತ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular