HomeKarnatakaBIG NEWS : ನಿನ್ನೆಯ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ : ಮಾಜಿ...

BIG NEWS : ನಿನ್ನೆಯ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ : ಮಾಜಿ ಸಿಎಂ HDK ಕಿಡಿ

ಬೆಂಗಳೂರು : ವಿಧಾನಸಭೆಯಲ್ಲಿ ನಿನ್ನೆ ನಡೆದ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಐಎಎಸ್ ಅಧಿಕಾರಿಗಳ ದುರುಪಯೋಗ ಬಗ್ಗೆ ನಿನ್ನೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದ್ದರು. ಆಡಳಿತ ಪಕ್ಷದವರು ತಪ್ಪೆ ಮಾಡಿಲ್ಲ ಎಂದು ಉದ್ಧಟತನ ತೋರಿದ್ರು ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ಶಾಸಕರು ಆ ರೀತಿಯಲ್ಲಿ ವರ್ತನೆ ಮಾಡಿದ್ದಕ್ಕೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ ಎಂದು ಕಿಡಿಕಾರಿದರು.

ಮೈತ್ರಿಕೂಟ ರಚನೆ ಸಭೆಗೆ ಬಂದಿದ್ದ ರಾಜಕೀಯ ವ್ಯಕ್ತಿಗಳ ಅತಿಥ್ಯಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ ಕ್ರಮಕ್ಕೆ ಬಿಜೆಪಿ ನಿನ್ನೆ ವಿಧಾನಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular