HomeLatest Newsಯತ್ನಾಳ್ ಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂಬುದು ಅವರ ಮಾತಿನಿಂದಲೇ ಗೊತ್ತಾಗುತ್ತಿದೆ: ಸಚಿವ ತಂಗಡಗಿ ಕಿಡಿ

ಯತ್ನಾಳ್ ಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂಬುದು ಅವರ ಮಾತಿನಿಂದಲೇ ಗೊತ್ತಾಗುತ್ತಿದೆ: ಸಚಿವ ತಂಗಡಗಿ ಕಿಡಿ

ಕೊಪ್ಪಳ: ಮುಸ್ಲಿಂ ಸಮಾಜದ ಯುವತಿಯರನ್ನು ಪ್ರೀತಿಸಿ ಮದುವೆಯಾದರೆ ೫ ಲಕ್ಷ ಹಣ ಕೊಡುತ್ತೇನೆ ಎಂದು ಘೋಷಿಸಿರುವ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಯನ್ನು ಸಚಿವ ಶಿವರಾಜ್ ತಂಗಡಗಿ ತೀವ್ರವಾಗಿ ಖಂಡಿಸಿದ್ದಾರೆ.

ಕ್ಪ್ಪಳದಲ್ಲಿ ಮಾತನಾಡಿದ ಸಚಿವ ತಂಗಡಗಿ, ಯತ್ನಾಳ್ ಗೆ ಮಹಿಳೆಯ ಬಗ್ಗೆ ಗೌರವವಿಲ್ಲ ಎಂಬುದು ಅವರ ಮಾತಿಂದಲೇ ಗೊತ್ತಾಗುತ್ತಿದೆ. ಅದ್ಯಾವ ನೈತಿಕತೆಯಿಂದ ಅವರು ಈ ರೀತಿ ಹೇಳಿಕೆ ಕೊಡುತ್ತಾರೆ? ಎಂದು ಪ್ರಶ್ನಿಸಿದರು.

ದುಡ್ಡು ಇವರ ಬಳಿ ಮಾತ್ರ ಇದೆ ಅಂದುಕೊಂಡಿದ್ದಾರಾ? ಬೇರೆ ಜಾತಿ ಧರ್ಮದ ಹೆಣ್ಣುಮಕ್ಕಳ ವಿಷಯದಲ್ಲಿ ಕೀಳಾಗಿ ಮಾತನಾಡುವುದು ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪುವುದಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular