HomeLatest NewsBIG NEWS: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

BIG NEWS: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಜಾತಿಗಣತಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿನ್ ಮಾಜಿ ಸಂಸದ ಪ್ರತಾಪ್ ಸಿಂಹ, ಜಾತಿಗಣತಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯಗೆ ಏನು ಗೊತ್ತು? ಅವರು ಇನ್ನೂ ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸೋಷಿಯಲ್ ಎಕನಾಮಿಕ್ ಬಗ್ಗೆ ಯತೀಂದ್ರಗೆ ಏನೂ ಗೊತ್ತಿಲ್ಲ. ಲಿಂಗಾಯಿತರು ವಿರೋಧ ಮಾಡಿದರು ಅದಕ್ಕೆ ಮತ್ತೊಮ್ಮೆ ಜಾತಿಗಣತಿ ಮಾಡುತ್ತೇವೆ ಎನ್ನುತ್ತಾರೆ. 39 ಜನ ಶಾಸಕರು ಲಿಂಗಾಯಿತರಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಕುರ್ಚಿ ಬಿಟ್ಟು ಕೊಡ್ತಾರಾ? ವಿರೋಧವಿದ್ದರೆ ಕುರ್ಚಿ ಬಿಟ್ತುಕೊಡಲಿ ಎಂದು ಹೇಳಿದರು.

ಯತೀಂದ್ರ ಸಿದ್ದರಾಮಯ್ಯ ತಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನೋ ಹೇಳುತ್ತಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ಏನೇನೋ ಹೇಳಿಕೆ ಕೊಡಬೇಡಿ ಜಾತಿಗಣತಿ ಎಂದು ಸಿದ್ದರಾಮಯ್ಯ 150 ಕೋಟಿ ಖರ್ಚು ಮಾಡಿ ಕಾಟಾಚಾರಕ್ಕೆ ಗಣತಿ ಮಾಡಿದರು. ಈಗ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮರು ಸಮೀಕ್ಷೆ ಎನ್ನುತ್ತಿದ್ದಾರೆ. ಇದರಿಂದ 150 ಕೋಟಿ ಹಣ ವ್ಯರ್ಥವಾಗುತ್ತೆ ಎಂದು ವಾಗ್ದಾಳಿ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular