ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಟಾಕ್ಸಿಕ್ ಟೀಸರ್ ಸದ್ಯ ಇಡೀ ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡ್ತಿದೆ. ನಿನ್ನೆ (ಫೆಬ್ರವರಿ 20) ಬಿಡುಗಡೆಯಾದ ಈ ಟೀಸರ್ ಕೇವಲ 24 ಗಂಟೆಗಳಲ್ಲಿ ಸುಮಾರು 5 ಕೋಟಿ (50 Million) ವೀವ್ಸ್ ಪಡೆದುಕೊಳ್ಳುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ್ ಯಶ್ ಅವರ ಕ್ರೇಜ್ ಏನೆಂಬುದನ್ನು ಸಾಬೀತುಪಡಿಸಿದೆ.
ಹಿಂದಿಯಲ್ಲಿ ಟಾಕ್ಸಿಕ್ ಅಬ್ಬರ
ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆದ ಟೀಸರ್ ಪೈಕಿ, ಹಿಂದಿ ವರ್ಷನ್ ಅತಿ ಹೆಚ್ಚು ಸದ್ದು ಮಾಡಿದೆ. ಕೇವಲ ಒಂದು ದಿನದಲ್ಲಿ ಹಿಂದಿ ಟೀಸರ್ ಬರೋಬ್ಬರಿ 2.19 ಕೋಟಿ ವೀವ್ಸ್ ಪಡೆದು ನಂಬರ್ 1 ಸ್ಥಾನದಲ್ಲಿದೆ. ತೆಲುಗಿನಲ್ಲಿ 1.10 ಕೋಟಿ ಮಂದಿ ಟೀಸರ್ ವೀಕ್ಷಿಸಿದ್ದರೆ, ಕನ್ನಡದಲ್ಲಿ 74 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆಯುವ ಮೂಲಕ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ ಬರೆದಿದೆ.
ಭಾಷಾವಾರು ವೀವ್ಸ್ ರಿಪೋರ್ಟ್ (24 ಗಂಟೆಗಳಲ್ಲಿ):ಹೀಗಿದೆ
ಹಿಂದಿ: 2.19 ಕೋಟಿ+
ತೆಲುಗು: 1.10 ಕೋಟಿ+
ಕನ್ನಡ: 74.19 ಲಕ್ಷ+
ತಮಿಳು: 54.31 ಲಕ್ಷ+
ಮಲಯಾಳಂ: 27.63 ಲಕ್ಷ+
ಟೀಸರ್‌ನಲ್ಲಿ ಏನಿದೆ ವಿಶೇಷ?
1:55 ನಿಮಿಷದ ಈ ಟೀಸರ್ ಪಕ್ಕಾ ಆಕ್ಷನ್ ಪ್ಯಾಕ್ಡ್ ಆಗಿದ್ದು, ರಕ್ತಪಾತ ಮತ್ತು ಯಶ್ ಅವರ ಡಿಫರೆಂಟ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಹೆಚ್ಚಿಸಿದೆ. ಹಾಲಿವುಡ್ ಖ್ಯಾತ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಅವರ ಸಾಹಸ ದೃಶ್ಯಗಳು ಟೀಸರ್‌ನ ಹೈಲೈಟ್.
ಸ್ಟಾರ್ ಗ್ಯಾಂಗ್ ಹಾಗೂ ತಾಂತ್ರಿಕ ಬಲ
ಈ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಜೀವ್ ರವಿ ಅವರ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಅವರ ಸಂಗೀತ ಸಿನಿಮಾಗೆ ಮೆರುಗು ನೀಡಿದೆ.
ರಿಲೀಸ್ ಡೇಟ್ ಫಿಕ್ಸ್
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬಂಡವಾಳ ಹೂಡಿರುವ ಟಾಕ್ಸಿಕ್, ಮಾರ್ಚ್ 19, 2026 ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಅದೇ ದಿನ ರಣವೀರ್ ಸಿಂಗ್ ಅವರ ಧುರಂಧರ್ 2 ಕೂಡ ರಿಲೀಸ್ ಆಗುತ್ತಿದ್ದು ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್ ನಡೆಯುವುದು ಗ್ಯಾರಂಟಿ.

