HomeLatest NewsBREAKING: ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ ದುರಂತ: ಭೀಮಾನದಿ ನೀರು ಪಾಲಾದ ಇಬ್ಬರು ಯುವಕರು!

BREAKING: ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ ದುರಂತ: ಭೀಮಾನದಿ ನೀರು ಪಾಲಾದ ಇಬ್ಬರು ಯುವಕರು!

ಯಾದಗಿರಿ: ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ಇಬ್ಬರು ಯುವಕರು ಭೀಮಾನದಿ ನೀರುಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ವಡೆಗೇರ ತಾಲೂಕಿನ ಮಾಚನೂರ್ ಬಳಿ ಈ ದುರಂತ ಸಂಭವಿಸಿದೆ. ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಯುವಕರು, ಜಾನುವಾರಿಗಳಿಗೆ ನೀರು ಕುಡಿಸಲೆಂದು ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ.

ಸಿದ್ದಪ್ಪ (20) ಹಾಗೂ ರಾಮು (18) ನೀರು ಪಾಲಾಗಿರುವ ಯುವಕರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ಯುವಕರಿಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular