HomeLatest NewsWorld Idli Day: ಇಡ್ಲಿ ಅಂದ್ರೆ ಬರೀ ತಿಂಡಿಯಲ್ಲ, ಅದೊಂದು ಸಂಸ್ಕೃತಿ ವಿಶ್ವ ಇಡ್ಲಿ ದಿನದ...

World Idli Day: ಇಡ್ಲಿ ಅಂದ್ರೆ ಬರೀ ತಿಂಡಿಯಲ್ಲ, ಅದೊಂದು ಸಂಸ್ಕೃತಿ ವಿಶ್ವ ಇಡ್ಲಿ ದಿನದ ವಿಶೇಷತೆ ಇಲ್ಲಿದೆ.

ಬೆಂಗಳೂರು: ದಕ್ಷಿಣ ಭಾರತದ ಮನೆಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಘಮಘಮಿಸುವ ಇಡ್ಲಿ-ಸಾಂಬಾರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಬರೀ ಹೊಟ್ಟೆ ತುಂಬಿಸುವ ತಿಂಡಿಯಷ್ಟೇ ಅಲ್ಲದೆ, ವಿಶ್ವದ ಅತ್ಯಂತ ಆರೋಗ್ಯಕರ ಉಪಾಹಾರ ಎಂದು ಬಿಬಿಸಿ (BBC) ಸಮೀಕ್ಷೆಯಲ್ಲೂ ಪ್ರಶಂಸೆ ಪಡೆದಿರುವ ಈ ಬಿಳಿ ಸುಂದರಿಗೆ ಇಂದು (ಮಾರ್ಚ್ 30) ವಿಶೇಷ ದಿನ. ಹೌದು, ಇಂದು ವಿಶ್ವ ಇಡ್ಲಿ ದಿನ (World Idli Day).

ಇಡ್ಲಿ ದಿನದ ಆರಂಭವಾಗಿದ್ದು ಹೇಗೆ?

ಈ ದಿನಾಚರಣೆಯ ಹಿಂದೆ ಒಬ್ಬ ಆಟೋ ಡ್ರೈವರ್‌ನ ರೋಚಕ ಕಥೆಯಿದೆ ತಮಿಳುನಾಡಿನ ಇನಿಯವನ್ ಎಂಬುವವರು ಕೇವಲ ಎಂಟನೇ ತರಗತಿವರೆಗೆ ಓದಿ ಆಟೋ ಓಡಿಸುತ್ತಿದ್ದರು. ಇಡ್ಲಿ ತಯಾರಿಸುವ ಮಹಿಳೆಯೊಬ್ಬರ ಪರಿಚಯದಿಂದ ಪ್ರೇರಿತರಾದ ಇವರು ಇಡ್ಲಿ ತಯಾರಿಕೆಯಲ್ಲಿ ಹೊಸ ಕ್ರಾಂತಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಿನ್ನೆಸ್ ದಾಖಲೆ: 2013ರಲ್ಲಿ ಇನಿಯವನ್ 128 ಕೆಜಿ ತೂಕದ ಬೃಹತ್ ಇಡ್ಲಿ ತಯಾರಿಸಿ ವಿಶ್ವ ದಾಖಲೆ ಬರೆದಿದ್ದರು.ಕೇವಲ ಸಾಮಾನ್ಯ ಇಡ್ಲಿ ಮಾತ್ರವಲ್ಲದೆ, ಸುಮಾರು 2000ಕ್ಕೂ ಹೆಚ್ಚು ವಿವಿಧ ಬಗೆಯ ಇಡ್ಲಿಗಳನ್ನು ತಯಾರಿಸಿ ಪ್ರಯೋಗ ನಡೆಸಿದ್ದಾರೆ.

ಗೌರವ ಡಾಕ್ಟರೇಟ್: ಇವರ ಈ ಸಾಧನೆಯನ್ನು ಗುರುತಿಸಿ ಅಮೆರಿಕದ ವಿವಿಯೊಂದು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಇವರ ಜನ್ಮದಿನವಾದ ಮಾರ್ಚ್ 30ನ್ನೇ ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇಡ್ಲಿಗೆ ಇದೆ ಸಾವಿರಾರು ವರ್ಷಗಳ ಇತಿಹಾಸ

ಇಡ್ಲಿ ಎಲ್ಲಿಂದ ಬಂತು ಎಂಬ ಬಗ್ಗೆ ಇಂದಿಗೂ ಚರ್ಚೆಗಳಿವೆ. ಆದರೆ ನಮ್ಮ ಕನ್ನಡ ನಾಡಿನ ಇತಿಹಾಸದಲ್ಲಿ ಇದಕ್ಕೆ ಪುರಾತನ ದಾಖಲೆಗಳಿವೆ.ವಡ್ಡಾರಾಧನೆ (ಕ್ರಿ.ಶ. 920) ಶಿವಕೋಟ್ಯಾಚಾರ್ಯರು ಬರೆದ ಈ ಕೃತಿಯಲ್ಲಿ ಇಡ್ಲಿಯ ಬಗ್ಗೆ ಮೊದಲ ಉಲ್ಲೇಖವಿದೆ. ಆ ಕಾಲದಲ್ಲಿ ಕೇವಲ ಉದ್ದಿನ ಬೇಳೆಯಿಂದ ಇಡ್ಲಿ ತಯಾರಿಸಲಾಗುತ್ತಿತ್ತು.

ಮಾನಸೋಲ್ಲಾಸ (ಕ್ರಿ.ಶ. 1130) ಮೂರನೇ ಸೋಮೇಶ್ವರನ ಸಂಸ್ಕೃತ ಗ್ರಂಥದಲ್ಲಿ ಇಡ್ಲಿ ತಯಾರಿಸುವ ವಿಧಾನದ ವರ್ಣನೆಯಿದೆ.ಇಂಡೋನೇಷ್ಯಾ ಕನೆಕ್ಷನ್ ಫರ್ಮೆಂಟೇಶನ್ (ಹುದುಗು ಬರಿಸುವಿಕೆ) ಪ್ರಕ್ರಿಯೆ ಮೊದಲು ಇಂಡೋನೇಷ್ಯಾದಲ್ಲಿ ಆರಂಭವಾದ್ದರಿಂದ, ಅಲ್ಲಿಂದಲೇ ಇಡ್ಲಿ ಭಾರತಕ್ಕೆ ಬಂದಿರಬಹುದು ಎಂಬ ವಾದವೂ ಇದೆ.

ಇಡ್ಲಿ ಏಕೆ ಸೂಪರ್ ಫುಡ್?

ಆರೋಗ್ಯದ ದೃಷ್ಟಿಯಿಂದ ಇಡ್ಲಿಯನ್ನು ಮೀರಿಸುವ ತಿಂಡಿ ಮತ್ತೊಂದಿಲ್ಲ.ಮೂರು ಇಡ್ಲಿ ತಿಂದರೆ ನಿಮಗೆ ಸುಮಾರು 230 ಕ್ಯಾಲೋರಿ ಶಕ್ತಿ, 7 ಗ್ರಾಂ ಪ್ರೊಟೀನ್ ಮತ್ತು 5 ಗ್ರಾಂ ನಾರಿನಂಶ ಸಿಗುತ್ತದೆ.ಹಬೆಯಲ್ಲಿ ಬೇಯಿಸುವುದರಿಂದ ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಕೊಬ್ಬಿನಂಶ ತೀರಾ ಕಡಿಮೆ ಇರುತ್ತದೆ.

ಇಡ್ಲಿಯಲ್ಲಿನ ವೈವಿಧ್ಯಗಳು:

ಇಂದು ಮಾರುಕಟ್ಟೆಯಲ್ಲಿ ರವೆ ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ಮಿನಿ ಇಡ್ಲಿ, ರಾಗಿ ಇಡ್ಲಿ ಹೀಗೆ ನೂರಾರು ವೆರೈಟಿಗಳು ಲಭ್ಯವಿವೆ. ಉಡುಪಿ ಹೋಟೆಲ್‌ಗಳ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿರುವ ಇಡ್ಲಿ, ಇಂದು ಸ್ಪೇನ್, ಯುರೋಪ್‌ನಂತಹ ದೇಶಗಳಲ್ಲೂ ಭಾರತೀಯರ ನೆಚ್ಚಿನ ಆಹಾರವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular